ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-02-2022)

Social Share

ನಿತ್ಯ ನೀತಿ :  ಸಮುದ್ರ ಸಮೀಪದಲ್ಲಿದ್ದರೂ ಬಾಯಾ ರಿಕೆ ತಣಿಸಲು ನದಿ ನೀರೇ ಬೇಕು. ಸ್ನೇಹಿತರು, ಬಂಧುಗಳು ಎಷ್ಟೇ ಇದ್ದರೂ ಸಹ ಜೀವನದಲ್ಲಿ ಭಗವಂತನ ಆಶೀರ್ವಾದ ಇರಲೇ ಬೇಕು. 

# ಪಂಚಾಂಗ : ಬುಧವಾರ , 16-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ  ಮಾಸ | ಶುಕ್ಲ ಪಕ್ಷ | ತಿಥಿ: ಹುಣ್ಣಿಮೆ| ನಕ್ಷತ್ರ: ಆಶ್ಲೇಷಾ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.42
* ಸೂರ್ಯಾಸ್ತ : 06.26
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00
# ರಾಶಿಭವಿಷ್ಯ 
ಮೇಷ: ಹಲ್ಲುಗಳಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವೃಷಭ: ಯಾರೊಂದಿಗಾದರೂ ವೈರತ್ವ ಹೊಂದಿದ್ದರೆ ಅವರ ಬಗೆಗಿನ ಎಲ್ಲಾ ತಪ್ಪುಗ್ರಹಿಕೆಗಳು ದೂರವಾಗಲಿವೆ.
ಮಿಥುನ: ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯುವಿರಿ.
ಕಟಕ:ಆಸ್ತಿ ಸಂಬಂಧಿತ ಕೆಲಸ ಮಾಡುವವರಿಗೆ ಉತ್ತಮ ದಿನವಾಗಿದೆ.
ಸಿಂಹ: ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳಿತು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಕನ್ಯಾ: ವ್ಯಾಪಾರಸ್ಥರು ಲಾಭ ಹೆಚ್ಚು ಒತ್ತಡದಿಂದ ಕೆಲಸ ಮಾಡಬೇಕಾಗುತ್ತದೆ.
ತುಲಾ: ಸ್ನೇಹಿತರ ಸಹಾಯ ದಿಂದ ವೃತ್ತಿ ಕ್ಷೇತ್ರದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು.
ವೃಶ್ಚಿಕ: ಪತ್ನಿಯ ಬೆಂಬಲದೊಂದಿಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವಿರಿ.
ಧನುಸ್ಸು: ಆರೋಗ್ಯದ ವಿಷಯದಲ್ಲಿಯೂ ಕಾಳಜಿ ತೆಗೆದುಕೊಳ್ಳಬೇಕು. ಮಾನಸಿಕ ಒತ್ತಡ ಹೆಚ್ಚಾಗಬಹುದು.
ಮಕರ: ಪೋಷಕರು, ಹಿರಿಯರ ಆಶೀರ್ವಾದ ಪಡೆದು ಮನೆಯಿಂದ ಹೊರ ಬರುವುದು ಒಳಿತು.
ಕುಂಭ: ಪ್ರಯಾಣದಲ್ಲಿ ತೊಂದರೆಯಾಗಬಹುದು. ಶಿಕ್ಷಕರ ಆಶೀರ್ವಾದ ಪಡೆಯಿರಿ.
ಮೀನ: ಯೋಗ, ಧ್ಯಾನ ಮಾಡುವುದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ.

Articles You Might Like

Share This Article