ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(16-02-2023)

Social Share

ನಿತ್ಯ ನೀತಿ : ಯಾರಾದರೂ ನನಗೆ ಕೆಡುಕನ್ನು ಮಾಡಿದರೆ ಅದು ಅವರ ಕರ್ಮ. ಯಾರ ಕೆಡುಕನ್ನೂ ನಾನು ಬಯಸದೆ ಇರುವುದು ನನ್ನ ಧರ್ಮ.

# ಪಂಚಾಂಗ : ಗುರುವಾರ, 16-02-2023
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ ‘/ ನಕ್ಷತ್ರ: ಮೂಲಾ / ಯೋಗ: ಹರ್ಷಣ
ಕರಣ: ಭವ

ಸೂರ್ಯೋದಯ : ಬೆ.06.42
ಸೂರ್ಯಾಸ್ತ : 06.26
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

# ಇಂದಿನ ರಾಶಿಭವಿಷ್ಯ :
ಮೇಷ:
ಅನವಶ್ಯಕ ಮತ್ತು ಋಣಾತ್ಮಕವಾಗಿ ಚಿಂತಿಸದಿರಿ. ಬಹಳ ದಿನಗಳ ಬಳಿಕ ಬಂಧು-ಮಿತ್ರರ ಜತೆಗಿನ ಒಡನಾಟ ಸಂತೋಷ ತರಲಿದೆ.
ವೃಷಭ: ಸರ್ಕಾರಿ ಕಚೇರಿಗಳಲ್ಲಿನ ಕೆಲಸಕ್ಕೆ ಹೆಚ್ಚು ಓಡಾಡುವ ಸಂದರ್ಭ ಎದುರಾಗುವುದು.
ಮಿಥುನ: ಹೊಸ ಮನೆ ಕೊಳ್ಳುವ ಬಗ್ಗೆ ಮಧ್ಯವರ್ತಿಗಳೊಂದಿಗೆ ಮಾತುಕತೆ ನಡೆಸಿ.

ಕಟಕ: ಯಶಸ್ಸಿಗೆ ಕಾರಣ ರಾದವರು ಮತ್ತು ಯಶಸ್ಸಿಗೆ ಹೆಗಲು ಕೊಟ್ಟವರನ್ನು ಸದಾ ನಿಮ್ಮ ಜತೆಯಲ್ಲಿರಿಸಿಕೊಳ್ಳಿ.
ಸಿಂಹ: ಸ್ನೇಹಿತರು ಹಾಗೂ ಕುಟುಂಬದವರ ಸಲಹೆ ಮೇರೆಗೆ ಕೆಲವು ಉತ್ತಮ ಬದಲಾವಣೆ ಮಾಡಿಕೊಳ್ಳಿ.
ಕನ್ಯಾ: ಕೆಲ ನಿರ್ಧಾರಗಳನ್ನು ಬದಲಾಯಿಸಿಕೊಳ್ಳುವುದರಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಬಹಳ ಉತ್ತಮ ದಿನ.

ತುಲಾ: ಕಾಫಿ ಬೆಳೆಗಾರರಿಗೆ ಸಂತೋಷದ ವಾತಾ ವರಣ ಇರುತ್ತದೆ. ಖರ್ಚು-ವೆಚ್ಚ ಹಿಡತದಲ್ಲಿರಲಿ.
ವೃಶ್ಚಿಕ: ಆಲೋಚಿಸಿದ ಹೊಸ ಕೆಲಸಗಳು ಸ್ವಲ್ಪ ತಡವಾಗಿ ಪ್ರಾರಂಭವಾದರೂ ಸುಸೂತ್ರವಾಗಿ ನೆರವೇರಲಿವೆ.
ಧನುಸ್ಸು: ನಿರುದ್ಯೋಗಿಗಳು ಬಂದ ಅವಕಾಶವನ್ನು ಒಪ್ಪಿಕೊಳ್ಳುವುದು ಬಹಳ ಒಳ್ಳೆಯದು.

ಮಕರ: ಕೌಟುಂಬಿಕವಾಗಿ ಈಗಿರುವ ಕೆಲವು ಜವಾಬ್ದಾರಿ ಗಳನ್ನು ಕಡಿಮೆ ಮಾಡಿಕೊಳ್ಳುವುದು ಒಳಿತು.
ಕುಂಭ: ತಂದೆಯವರ ಆರೋಗ್ಯ ಉತ್ತಮವಾಗಿರ ಲಿದೆ. ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಿ.
ಮೀನ: ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡುವುದರಿಂದ ಮನಃಶಾಂತಿ ಸಿಗಲಿದೆ.

#Horoscope, #KannadaHoroscope, #DailyHoroscope, #TodayHoroscope, #EesanjeHoroscope, #ಪಂಚಾಂಗ #ರಾಶಿಭವಿಷ್ಯ,

Articles You Might Like

Share This Article