ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-05-2022)

Spread the love

ನಿತ್ಯ ನೀತಿ : ಖುಷಿಯಾಗಿರೋದಕ್ಕೆ ಶ್ರೀಮಂತನಾಗೋವರೆಗೂ ಕಾಯ್ಬೇಡ, ಯಾಕಂದ್ರೆ ಸಂತೋಷ ಉಚಿತವಾಗಿ ಸಿಗುತ್ತದೆ.

# ಪಂಚಾಂಗ : ಸೋಮವಾರ, 16-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ/ ನಕ್ಷತ್ರ: ವಿಶಾಖಾ/ಮಳೆ ನಕ್ಷತ್ರ: ಕೃತ್ತಿಕಾ

* ಸೂರ್ಯೋದಯ : ಬೆ.5.54
* ಸೂರ್ಯಾಸ್ತ : 06.38
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00

# ಇಂದಿನ ರಾಶಿ ಭವಿಷ್ಯ : 
ಮೇಷ: ಅಪರೂಪದ ಅತಿಥಿ ಆಗಮನದಿಂದ ಸಂತೋಷವಾಗಲಿದೆ. ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ಯೋಚಿಸಬೇಡಿ.
ವೃಷಭ: ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗಲಿದೆ.
ಮಿಥುನ: ಮಾನಸಿಕ ಒತ್ತಡ ಹೆಚ್ಚಾಗುವುದು. ಕೆಲಸ-ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ.

ಕಟಕ: ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಎದುರಾಗಲಿವೆ. ಆಯಾಸ ಹೆಚ್ಚಾಗಲಿದೆ.
ಸಿಂಹ: ಅಧಿಕ ಆತ್ಮವಿಶ್ವಾಸ ದಿಂದ ಸಾಮಥ್ರ್ಯಕ್ಕಿಂತ ಹೆಚ್ಚು ಕೆಲಸ ಮಾಡುವಿರಿ.
ಕನ್ಯಾ: ಯಾವುದೇ ಕಾರ್ಯ ಕೈಗೊಂಡರೂ ಹೆಜ್ಜೆ ಹೆಜ್ಜೆಗೂ ಅಡೆತಡೆ ಎದುರಾಗಲಿದೆ.

ತುಲಾ: ಅಮೂಲ್ಯ ವಸ್ತುಗಳ ಖರೀದಿಗೆ ಇಂದು ಉತ್ತಮವಾದ ದಿನ.
ವೃಶ್ಚಿಕ: ಮಧ್ಯವರ್ತಿಗಳ ಸಹಾಯದಿಂದ ವಿವಾಹದ ವಿಷಯದಲ್ಲಿ ಅನುಕೂಲಕರವಾಗಲಿದೆ.
ಧನುಸ್ಸು: ಕುಟುಂಬದವರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.

ಮಕರ: ಹೊಸ ಜವಾಬ್ದಾರಿ ಹೊರುವ ಸಂದರ್ಭಗಳು ಎದುರಾಗಬಹುದು.
ಕುಂಭ: ಧಾರ್ಮಿಕ ಕೆಲಸ-ಕಾರ್ಯಗಳಲ್ಲಿ ಭಾಗವಹಿಸು ವಿರಿ. ದೂರ ಪ್ರಯಾಣ ಮಾಡಬೇಕಾಗಬಹುದು.
ಮೀನ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.