ನಿತ್ಯ ನೀತಿ : ಕಣ್ಣ ಮುಂದೆ ಮಾತ್ರವಲ್ಲ, ಬೆನ್ನಹಿಂದೆಯೂ ಪ್ರಾಮಾಣಿಕವಾಗಿರುವ ಸಂಬಂಧ ಬಹಳ ಕಾಲ ಗಟ್ಟಿಯಾಗಿರುತ್ತದೆ.
# ಪಂಚಾಂಗ : ಗುರುವಾರ , 17-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ ಮಾಸ | ಕೃಷ್ಣ ಪಕ್ಷ | ತಿಥಿ: ಪ್ರತಿಪದ್| ನಕ್ಷತ್ರ: ಮಘಾ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.42
* ಸೂರ್ಯಾಸ್ತ : 06.26
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30
# ರಾಶಿಭವಿಷ್ಯ
ಮೇಷ: ಅನಗತ್ಯ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುವುದನ್ನು ನಿಯಂತ್ರಿಸಲು ಪ್ರಯತ್ನಿಸಿ.
ವೃಷಭ: ಕಟ್ಟಡ ವ್ಯವಹಾರಕ್ಕೆ ಸಂಬಂಧಿಸಿದ ಜನರಿಗೆ ಬಹಳ ಅನುಕೂಲಕರವಾದ ದಿನವಾಗಿದೆ.
ಮಿಥುನ: ನಿರೀಕ್ಷೆಗಿಂತ ಹೆಚ್ಚು ಖರ್ಚು ಮಾಡ ಬೇಕಾದ ಸಂದರ್ಭಗಳು ಎದುರಾಗಬಹುದು.
ಕಟಕ: ಕಡಿಮೆ ಶ್ರಮದಿಂದ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಸಿಂಹ: ನೀವು ಮಾಡುವ ಕೆಲಸಕ್ಕೆ ಹಿರಿಯರು ಅಥವಾ ಒಡಹುಟ್ಟಿದವರ ಸಹಾಯ ಪಡೆಯಬೇಕಾಗುತ್ತದೆ.
ಕನ್ಯಾ: ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ.
ತುಲಾ: ಯಾವುದಾದರೂ ವಿಷಯದ ಬಗ್ಗೆ ಅತಿಯಾಗಿ ಚಿಂತಿಸಬೇಕಾಗಬಹುದು.
ವೃಶ್ಚಿಕ: ಅನಗತ್ಯ ವಸ್ತುಗಳ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.
ಧನುಸ್ಸು: ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಿ. ಸಮತೋಲಿತ ರೀತಿಯಲ್ಲಿ ಆಹಾರ ಸೇವಿಸಿ.
ಮಕರ: ನೀವು ಮಾಡುವ ಉತ್ತಮ ಕೆಲಸಗಳಿಗೆ ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ.
ಕುಂಭ: ನಿಮ್ಮ ಹಣ ಎಲ್ಲೋ ಸಿಕ್ಕಿಹಾಕಿಕೊಂಡಿದ್ದರೆ, ಹಣವನ್ನು ಮರಳಿ ಪಡೆಯಲು ಪ್ರಯತ್ನಿಸಿ.
ಮೀನ: ನೀವು ಮಾಡುವ ಕೆಲಸಗಳಿಗೆ ಸಂಗಾತಿ ಯಿಂದ ನಿರೀಕ್ಷಿಸಿದಷ್ಟು ಬೆಂಬಲ ದೊರೆಯುವುದಿಲ್ಲ.
