ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-02-2023)

Social Share

ನಿತ್ಯ ನೀತಿ : ಹೊಸ ಅಭಿಪ್ರಾಯಗಳನ್ನು ಜನರು ಸಾಮಾನ್ಯವಾಗಿ ಅನುಮಾನದಿಂದ ನೋಡುತ್ತಾರೆ, ವಿರೋಸುತ್ತಾರೆ. ಏಕೆಂದರೆ ಅವು ಸಾಕಷ್ಟು ಪರಿಚಿತವಾಗಿರುವುದಿಲ್ಲ.

ಪಂಚಾಂಗ : ಶುಕ್ರವಾರ, 17-02-2023
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ /ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಪೂರ್ವಾಷಾಢ / ಯೋಗ: ಸಿದ್ಧಿ / ಕರಣ: ಕೌಲವ

ಸೂರ್ಯೋದಯ : ಬೆ.06.42
ಸೂರ್ಯಾಸ್ತ : 06.26
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ಇಂದಿನ ರಾಶಿಭವಿಷ್ಯ
ಮೇಷ:
ರಫ್ತು, ಆಮದು ವ್ಯವಹಾರ ಮಾಡುವ ವರಿಗೆ ಉತ್ತಮ ಅವಕಾಶಗಳು ಸಿಗಲಿವೆ.
ವೃಷಭ: ಅವಿವಾಹಿತರಿಗೆ ವಿವಾಹ ಯೋಗ. ವ್ಯಾಪಾರದ ಚತುರತೆಯಿಂದ ಧನಲಾಭವಾಗಲಿದೆ.
ಮಿಥುನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ.

ಕಟಕ: ಕಠಿಣ ನಿರ್ಧಾರ ಕೈಗೊಳ್ಳುವ ಪ್ರಸಂಗ ಬರಬಹುದು. ಇದಕ್ಕಾಗಿ ವಿಚಲಿತರಾಗಬೇಕಿಲ್ಲ.
ಸಿಂಹ: ಪ್ರವಾಸೋದ್ಯಮ ಮತ್ತು ಸಾರಿಗೆ ಸಂಸ್ಥೆಯವರಿಗೆ ಉತ್ತಮ ಲಾಭ ಸಿಗಲಿದೆ.
ಕನ್ಯಾ: ಸ್ನೇಹಿತರ ಸಹಾಯದಿಂದ ನಿಮ್ಮ ಕೆಲಸ-ಕಾರ್ಯಗಳಲ್ಲಿ ಯಶಸ್ಸಿ ದೊರೆಯಲಿದೆ.

ತುಲಾ: ಆಹಾರ ಪದಾರ್ಥಗಳನ್ನು ಮಾರುವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ವೃಶ್ಚಿಕ: ಪ್ರಾಮಾಣಿಕತೆಗೆ ಸರಿಯಾದ ಫಲಗಳು ದೊರೆಯ ಲಿವೆ. ಹಣಕಾಸಿನ ಪರಿಸ್ಥಿತಿ ಸಾಮಾನ್ಯ ವಾಗಿರುತ್ತದೆ.
ಧನುಸ್ಸು: ಪ್ರಭಾವಿ ವ್ಯಕ್ತಿಗಳ ಜತೆಗಿನ ಒಡನಾಟ ದಿಂದಾಗಿ ಹೆಚ್ಚಿನ ಸ್ಥಾನಮಾನ ಸಿಗಲಿದೆ.

ಮಕರ: ವ್ಯಾಪಾರ ನಿಮಿತ್ತ ಪ್ರಯಾಣ ಮಾಡುವುದರಿಂದ ಹೊಸಬರ ಪರಿಚಯವಾಗಲಿದೆ.
ಕುಂಭ: ಹಿರಿಯ ಅಧಿಕಾರಿಗಳು ನಿಮ್ಮ ಕರ್ತವ್ಯ ನಿಷ್ಠೆಯನ್ನು ಗಮನಿಸಲಿದ್ದಾರೆ. ಎಚ್ಚರದಿಂದಿರಿ.
ಮೀನ: ರಫ್ತು ಉದ್ಯಮದವರಿಗೆ ಅಡೆತಡೆಗಳು ಎದುರಾಗಬಹುದು. ನಂಬಿಕೆ ದ್ರೋಹ ಆಗಬಹುದು.

#Horoscope, #KannadaHoroscope, #DailyHoroscope, #TodayHoroscope, #EesanjeHoroscope, #ಪಂಚಾಂಗ #ರಾಶಿಭವಿಷ್ಯ,

Articles You Might Like

Share This Article