ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-05-2022)

Spread the love

ನಿತ್ಯ ನೀತಿ : ಕೋಪದಿಂದ ಎಂದಿಗೂ ಕೆಟ್ಟ ನುಡಿಗಳನ್ನಾಡಿಬಿಡಬೇಡಿ. ನಿಮ್ಮ ಕೋಪ ಕರಗಿ ಬಿಡಬಹುದು. ಆದರೆ, ಆಡಿದ ಕೆಟ್ಟ ನುಡಿಗಳು ಹಾಗೆಯೇ ಉಳಿದುಬಿಡುತ್ತವೆ.

# ಪಂಚಾಂಗ : ಮಂಗಳವಾರ , 17-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಕೃಷ್ಣ ಪಕ್ಷ / ತಿಥಿ: ತೃತೀಯಾ/ ನಕ್ಷತ್ರ: ಜ್ಯೇಷ್ಠಾ/ಮಳೆ ನಕ್ಷತ್ರ: ಕೃತ್ತಿಕಾ

* ಸೂರ್ಯೋದಯ : ಬೆ.5.54
* ಸೂರ್ಯಾಸ್ತ : 06.39
* ರಾಹುಕಾಲ : 3.00-4.30
* ಯಮಗಂಡ ಕಾಲ : 9.00-10.30
* ಗುಳಿಕ ಕಾಲ : 12.00-1.30

# ಇಂದಿನ ರಾಶಿ ಭವಿಷ್ಯ : 
ಮೇಷ: ಹೊಸ ಉದ್ಯಮ ಪ್ರಾರಂಭಿಸಲು ಯೋಚಿಸು ವಿರಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಲಿದೆ.
ವೃಷಭ: ತಲೆನೋವು, ಶೀತ, ನೆಗಡಿಯಂತಹ ಸಣ್ಣಪುಟ್ಟ ಕಾಯಿಲೆಗಳು ಕಾಡಬಹುದು.
ಮಿಥುನ: ತರಕಾರಿ, ದಿನಸಿ ವ್ಯಾಪಾರಿಗಳಿಗೆ ಅತ್ಯುತ್ತಮವಾದ ಲಾಭ ದೊರೆಯಲಿದೆ.

ಕಟಕ: ಪಾಲುದಾರಿಕೆ ವಿಚಾರದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ.
ಸಿಂಹ: ಹಂತ ಹಂತವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.
ಕನ್ಯಾ: ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನ ಹರಿಸುವುದು ಒಳಿತು.

ತುಲಾ: ಗಣ್ಯ ವ್ಯಕ್ತಿಗಳ ಭೇಟಿಯಿಂದ ವ್ಯಾಪಾರ-ವ್ಯವಹಾರಗಳಿಗೆ ಅನುಕೂಲವಾಗಲಿದೆ.
ವೃಶ್ಚಿಕ: ಆತ್ಮಸ್ಥೈರ್ಯದಿಂದ ಮಾಡಿದ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ.
ಧನುಸ್ಸು: ಲೆಕ್ಕಪರಿಶೋಧಕರಿಗೆ ಅನಿರೀಕ್ಷಿತ ಸಮಸ್ಯೆಗಳು ತಲೆದೋರಬಹುದು.

ಮಕರ: ಹಣದ ಒಳಹರಿವು ಉತ್ತಮವಾಗಿರುತ್ತದೆ. ನಿರೀಕ್ಷಿತ ಮೂಲಗಳಿಂದ ಆದಾಯ ಬರಲಿದೆ.
ಕುಂಭ: ಅಣ್ಣ-ತಮ್ಮಂದಿರು ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಾಯ ಮಾಡುವರು.
ಮೀನ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳ ಬಹುದು. ಆದ್ದರಿಂದ ಜಾಗ್ರತೆಯಿಂದಿರಿ.