ನಿತ್ಯ ನೀತಿ :
ಒಳ್ಳೆಯ ಸದ್ಗುಣಗಳ ಮಕ್ಕಳಿದ್ದರೆ ದುಡ್ಡಿನ ಅಗತ್ಯವಿಲ್ಲ. ಮಕ್ಕಳು ಸರಿಯಾದ ಮಾರ್ಗದಲ್ಲಿ ಇಲ್ಲದೆ ಇದ್ದರೆ ದುಡ್ಡಿದ್ದರೂ ಪ್ರಯೋಜನವಿಲ್ಲ.
ಪಂಚಾಂಗ : ಭಾನುವಾರ, 17-09-2023
ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ವರ್ಷ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ
ತಿಥಿ: ದ್ವಿತೀಯಾ / ನಕ್ಷತ್ರ: ಹಸ್ತ / ಯೋಗ: ಬ್ರಹ್ಮ / ಕರಣ: ತೈತಿಲ
ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.20
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30
ಇಂದಿನ ರಾಶಿಭವಿಷ್ಯ
ಮೇಷ: ಖಾಸಗಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ನಿರಾಸಕ್ತಿ ಉಂಟಾಗಲಿದೆ.
ವೃಷಭ: ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರುವುದು ಒಳಿತು.
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿದೆ. ಮಹಿಳೆಯರಿಗೆ ಯಶಸ್ಸು ಸಿಗಲಿದೆ.
ಕಟಕ: ಆರ್ಥಿಕವಾಗಿ ಪ್ರಗತಿ ಸಾಸುವಿರಿ. ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಸಿಂಹ: ಸಿನಿಮಾ ಕ್ಷೇತ್ರದಲ್ಲಿ ರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ಕನ್ಯಾ: ಸಣ್ಣ ಕೈಗಾರಿಕೆ ವ್ಯಾಪಾರಿ ಗಳಿಗೆ ಲಾಭ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ.
ತುಲಾ: ನಿದ್ರಾಹೀನತೆ ಕಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು.
ವೃಶ್ಚಿಕ: ಸಾರ್ವಜನಿಕ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ.
ಧನುಸ್ಸು: ಹೂವಿನ ವ್ಯಾಪಾರಿಗಳಿಗೆ ಆದಾಯ ವೃದ್ಧಿ ಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ.
ಮಕರ: ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿರುವವರು ಉತ್ತಮ ಫಲ ನಿರೀಕ್ಷಿಸಬಹುದು.
ಕುಂಭ: ಮಕ್ಕಳ ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ. ದಿನಾಂತ್ಯದಲ್ಲಿ ಆಯಾಸವಾಗಬಹುದು.
ಮೀನ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉತ್ತಮ ದಿನ.
#Horoscope, #KannadaHoroscope, #DailyHoroscope, #TodayHoroscope #EesanjeHoroscope, #ರಾಶಿಭವಿಷ್ಯ, #ಪಂಚಾಂಗ