ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-05-2022)

Spread the love

ನಿತ್ಯ ನೀತಿ : ಜೀವನದಲ್ಲಿ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ ಎನ್ನುವುದೇ ಬದುಕು ಕಲಿಸುವ ಪಾಠ.

# ಪಂಚಾಂಗ : ಬುಧವಾರ , 18-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಕೃಷ್ಣ ಪಕ್ಷ / ತಿಥಿ: ತೃತೀಯಾ/ ನಕ್ಷತ್ರ: ಜ್ಯೇಷ್ಠಾ/ಮಳೆ ನಕ್ಷತ್ರ: ಕೃತ್ತಿಕಾ

* ಸೂರ್ಯೋದಯ : ಬೆ.5.54
* ಸೂರ್ಯಾಸ್ತ : 06.39
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00

# ಇಂದಿನ ರಾಶಿ ಭವಿಷ್ಯ : 
ಮೇಷ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ವೃಷಭ: ಪಿತ್ರಾರ್ಜಿತ ಆಸ್ತಿ ದೊರೆಯುವ ಸಾಧ್ಯತೆ ಗಳಿವೆ. ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಿ.
ಮಿಥುನ: ಉಸಿರಾಟದ ತೊಂದರೆ ಇರುವವರು ಎಚ್ಚರಿಕೆ ಯಿಂದಿದ್ದು, ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.

ಕಟಕ: ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರುವುದು ಬಹಳ ಸೂಕ್ತ.
ಸಿಂಹ: ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಿ. ಉತ್ತಮ ಆದಾಯ ಬರಲಿದೆ.
ಕನ್ಯಾ: ನೌಕರರಿಗೆ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುವ ಸಾಧ್ಯತೆಗಳಿವೆ.

ತುಲಾ: ಕೆಲವೊಂದು ವಿಷಯಗಳ ಪರಿಹಾರಕ್ಕಾಗಿ ಸಂಬಂಧಿಕರ ಮನೆಗೆ ಹೋಗುವಿರಿ.
ವೃಶ್ಚಿಕ: ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದರೆ ಅವರ ಗೌರವಕ್ಕೆ ಚ್ಯುತಿ ಬರಬಹುದು.
ಧನುಸ್ಸು: ಗೃಹ ನಿರ್ಮಾಣಕ್ಕೆ ಇದ್ದ ಅಡ್ಡಿ-ಆತಂಕಗಳು ದೂರವಾಗಲಿವೆ. ದೂರ ಪ್ರಯಾಣ ಮಾಡುವಿರಿ.

ಮಕರ: ಯಂತ್ರೋಪಕಣಗಳನ್ನು ದುರಸ್ತಿ ಮಾಡುವ ವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.
ಕುಂಭ: ಸರ್ಕಾರದಿಂದ ಬರಬೇಕಿದ್ದ ಹಣ ಬರಲಿದೆ. ಸಮಸ್ಯೆಗಳು ದೂರವಾಗಲಿವೆ.
ಮೀನ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.

Facebook Comments