ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-10-2021)

Spread the love

# ನಿತ್ಯ ನೀತಿ :
ದುರ್ಬುದ್ಧಿ ಉಪಯೋಗಿಸಿ ಗೆದ್ದು ಗಹಗಹಿಸಿ ನಗಬೇಡ. ನೀನು ಯಾವ ಬುದ್ಧಿ ಉಪಯೋಗಿಸಿ ಗೆದ್ದಿರುವೆಯೋ ಅದೇ ಬುದ್ಧಿಯಿಂದ ಮಣ್ಣು ಮುಕ್ಕುವೆ ಮರೆಯಬೇಡ.

# ಪಂಚಾಂಗ : 18-10-2021,ಸೋಮವಾರ
ಪ್ಲವನಾಮ ಸಂವತ್ಸವ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಪೂರ್ವಾಭಾದ್ರ / ಮಳೆ ನಕ್ಷತ್ರ: ಚಿತ್ತಾ
# ಸೂರ್ಯೋದಯ : ಬೆ.06.10, ಸೂರ್ಯಾಸ್ತ : 05.59
# ರಾಹುಕಾಲ : 7.30-9.00 , ಯಮಗಂಡ ಕಾಲ: 10.30-12.00, ಗುಳಿಕ ಕಾಲ -1.30-3.00

# ರಾಶಿ ಭವಿಷ್ಯ
ಮೇಷ: ನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿ ಕೊಳ್ಳಿ ಮತ್ತು ಫಿಟ್ ಆಗಿರಲು ವ್ಯಾಯಾಮ ಮಾಡಿ.
ವೃಷಭ: ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಹಾನಿ ಉಂಟಾಗಬಹುದು ಮತ್ತು ವ್ಯಾಪಾರವನ್ನು ಉತ್ತಮ ಗೊಳಿಸಲು ಹಣ ಖರ್ಚು ಮಾಡಬೇಕಾಗುತ್ತದೆ.
ಮಿಥುನ: ಕುಟುಂಬದ ಅಗತ್ಯಗಳನ್ನು ಪೂರೈಸುವುದರಲ್ಲಿ ಅನೇಕ ಬರಿ ನಿಮಗಾಗಿ ಸಮಯ ನೀಡುವುದನ್ನು ಮರೆತುಹೋಗುತ್ತೀರಿ.

ಕಟಕ: ಅಸಾಧ್ಯವಾದ ಅನ ಗತ್ಯ ಚಿಂತನೆಯಲ್ಲಿ ನಿಮ್ಮ ಶಕ್ತಿ ವ್ಯರ್ಥ ಮಾಡುವ ಬದಲು ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿ
ಸಿಂಹ: ಸಂಗಾತಿಯ ಬೇಡಿಕೆ ಗಳು ನಿಮಗೆ ಸ್ವಲ್ಪ ಒತ್ತಡ ಉಂಟುಮಾಡಬಹುದು
ಕನ್ಯಾ: ಕಚೇರಿಯಲ್ಲಿ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಉತ್ತಮವಲ್ಲ.

ತುಲಾ: ಅತಿಯಾಗಿ ತಿನ್ನುವುದು ಮತ್ತು ಹೆಚ್ಚಿನ ಕ್ಯಾಲೋರಿಯ ಆಹಾರವನ್ನು ತಪ್ಪಿಸಬೇಕು. ಬ್ಯಾಂಕ್ ವ್ಯವಹಾರಗಳಲ್ಲಿ ಕಾಳಜಿ ವಹಿಸಬೇಕು.
ವೃಶ್ಚಿಕ: ಕೆಲಸ ಮಾಡುವ ಮೊದಲೇ ಅದರ ಬಗ್ಗೆ ಒಳ್ಳೆಯದು ಕೆಟ್ಟದ್ದನ್ನು ಯೋಚಿಸಬೇಡಿ, ತಮ್ಮನ್ನು ಕೇಂದ್ರೀಕರಿಸಲು ಪ್ರಯತ್ನಿಸಿ. ಇದರಿಂದ ಎಲ್ಲಾ ಕೆಲಸಗಳು ಉತ್ತಮವಾಗುತ್ತವೆ
ಧನುಸ್ಸು: ಹಣಕ್ಕೆ ಸಂಬಂಸಿದ ಯಾವುದೇ ಸಮಸ್ಯೆ ಪರಿಹಹಾರವಾಗಬಹುದು.

ಮಕರ: ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ
ಕುಂಭ: ಪ್ರಮುಖ ನಿರ್ಧಾರವನ್ನು ಕುಟುಂಬ ದೊಂದಿಗೆ ಅಂತಿಮಗೊಳಿಸುವುದು ಒಳಿತು.
ಮೀನ: ನೀವು ತೆಗೆದುಕೊಳ್ಳುವ ನಿರ್ಧಾರಗಳಿಂದ ಕುಟುಂಬದವರಿಗೆ ಬೇಸರ ಉಂಟಾಗಬಹುದು.

Facebook Comments