ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(18-12-2022)

Social Share

ನಿತ್ಯ ನೀತಿ : ತಂದೆ-ತಾಯಿಯ ಒಳ್ಳೆಯ ಮಾತುಗಳು ಎಲ್ಲರಿಗೂ ಕಹಿಯಾಗುತ್ತವೆ. ಆದರೆ ತಂದೆ-ತಾಯಿಯ ಸಂಪತ್ತು ಮಾತ್ರ ಎಲ್ಲರಿಗೂ ಬೇಕಾಗುತ್ತದೆ.

ಪಂಚಾಂಗ : 18-12-2022, ಭಾನುವಾರ
ಶುಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಹಸ್ತ / ಮಳೆ ನಕ್ಷತ್ರ: ಮೂಲಾ

ಸೂರ್ಯೋದಯ : ಬೆ.06.35
ಸೂರ್ಯಾಸ್ತ : 05.57
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ಇಂದಿನ ರಾಶಿಭವಿಷ್ಯ

ಮೇಷ: ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ಯಾವುದೇ ಸಮಯದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದಿರಿ.
ವೃಷಭ: ಸ್ವಯಂ ಉದ್ಯೋಗಸ್ಥರಿಗೆ ಮತ್ತೊಬ್ಬರ ಸಹಾಯ ಅನಿವಾರ್ಯವಾಗಲಿದೆ.
ಮಿಥುನ: ಅತೀ ನಂಬಿಕೆ ಇಟ್ಟಿರುವ ಅಥವಾ ನಿಮ್ಮವರಿಂದಲೇ ತೊಂದರೆಗಳಾಗಲಿವೆ.

ಕಟಕ: ಅಪವಾದದ ಭೀತಿಗೆ ಒಳಗಾಗದಿರಿ. ಅವಿವಾಹಿತರು ಶುಭ ಸುದ್ದಿ ಕೇಳುವರು.
ಸಿಂಹ: ಹಣಕಾಸಿನ ವ್ಯತ್ಯಾಸ ಗಳಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.
ಕನ್ಯಾ: ಅಕ ಆತ್ಮವಿಶ್ವಾಸ ದಿಂದ ಸಾಮಥ್ರ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಲು ಹೋಗುವುದು ಸರಿಯಲ್ಲ.

ತುಲಾ: ಕೆಲಸದ ಸ್ಥಳ ದಲ್ಲಿ ನಿಮ್ಮ ಗಮನಕ್ಕೆ ಬರುವ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ.
ವೃಶ್ಚಿಕ: ಸೌಜನ್ಯತೆಯಿಂದ ನಡೆದುಕೊಳ್ಳುವುದರಿಂದ ನೆರೆಹೊರೆಯವರು ನಿಮಗೆ ಸ್ಪಂದಿಸುವರು.
ಧನುಸ್ಸು: ಇತರರ ಮಾತಿಗೆ ಕಿವಿಗೊಡದೆ ನಿಮ್ಮಂತೆ ಇರುವುದು ಕಷ್ಟವೆನಿಸಿದರೂ ಒಳ್ಳೆಯದು.

ಮಕರ: ಮಗನ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ. ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.
ಕುಂಭ: ಜಾಣ್ಮೆಯಿಂದ ಅವಕಾಶ ಬಳಸಿಕೊಂಡಲ್ಲಿ ಅಧಿಕಾರ ಪಡೆದುಕೊಳ್ಳುವುದು ಕಷ್ಟದ ಕೆಲಸವಲ್ಲ.
ಮೀನ: ಮನೆಗೆ ಹೊಸ ಪೀಠೋಪಕರಣಗಳ ಖರೀದಿಗೆ ಧನ ವ್ಯಯವಾಗಲಿದೆ.

ಚಳಿಗಾಲದ ಅಧಿವೇಶನಕ್ಕೆ ಮಾತ್ರ ಸೀಮಿತವಾದ ಸುವರ್ಣಸೌಧ, ಕಾಗದದಲ್ಲೇ ಉಳಿದ ಕಚೇರಿಗಳ ಸ್ಥಳಾಂತರ ಆದೇಶ

Articles You Might Like

Share This Article