ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-01-2022)

Social Share

ನಿತ್ಯ ನೀತಿ :  ಮುಕ್ತವಾದ ಮನಸ್ಸಿಲ್ಲದ ವ್ಯಕ್ತಿ ಬದುಕಿದ್ದರೂ ಸತ್ತಂತೆ. ಮುಕ್ತವಾದ ಮನಸ್ಸು ವ್ಯಕ್ತಿಯೊಬ್ಬನ ಅಸ್ತಿತ್ವದ ಪ್ರತೀಕ.
# ಪಂಚಾಂಗ : ಬುಧವಾರ , 19-01-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್/ ನಕ್ಷತ್ರ: ಆಶ್ಲೇಷಾ/ ಮಳೆ ನಕ್ಷತ್ರ: ಉತ್ತರಾಷಾಢ /
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.15
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00
# ರಾಶಿಭವಿಷ್ಯ
ಮೇಷ: ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡ ಬಹುದು. ಉದ್ಯೋಗಿಗಳ ವರ್ಗಾವಣೆ ಇರುತ್ತದೆ.
ವೃಷಭ: ಕೆಲವು ಹೊಸ ಕೆಲಸಗಳನ್ನು ಮಾಡಲು ಯೋಚಿಸುವಿರಿ. ಒಳ್ಳೆಯ ಕೆಲಸ ಸಿಗುತ್ತದೆ.
ಮಿಥುನ: ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಬಯಸಿದ ಸ್ಥಳಕ್ಕೆ ವರ್ಗಾವಣೆ ಪಡೆಯುತ್ತೀರಿ.
ಕಟಕ: ಕೌಟುಂಬಿಕ ವಿವಾದಗಳನ್ನು ಶಾಂತಿಯುತ ವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ.
ಸಿಂಹ: ದೀರ್ಘಕಾಲದ ಆರೋಗ್ಯ ಸಮಸ್ಯೆಗೆ ಉತ್ತಮ ವೈದ್ಯರು ಚಿಕಿತ್ಸೆ ನೀಡುತ್ತಾರೆ.
ಕನ್ಯಾ: ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ.
ತುಲಾ: ಹೊಸ ವ್ಯವಹಾರ ಪ್ರಾರಂಭಿಸಲು ಬಯಸಿದರೆ ಅದರಲ್ಲಿ ಯಶಸ್ವಿಯಾಗುತ್ತೀರಿ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ದಿನವಾಗಿರುತ್ತದೆ. ಶುಭಸುದ್ದಿ ಕೇಳುವಿರಿ.
ಧನುಸ್ಸು: ಕಲಾತ್ಮಕ ವಿಷಯಗಳ ಬಗ್ಗೆ ಉತ್ಸಾಹ ಮೂಡುವುದು. ಸಂಗಾತಿ ಬಗ್ಗೆ ಗೌರವ ಹೆಚ್ಚುತ್ತದೆ.
ಮಕರ: ಕೋಪದ ಮೇಲೆ ಸ್ವಲ್ಪ ನಿಯಂತ್ರಣವಿರಲಿ. ನೀವು ಮಾಡುವ ಕೆಲಸಗಳಿಗೆ ಹಿರಿಯರ ಬೆಂಬಲ ಸಿಗಲಿದೆ.
ಕುಂಭ: ಉದ್ಯೋಗಸ್ಥರು ಉನ್ನತಿಗಾಗಿ ಕಾಯ ಬೇಕಾಗುತ್ತದೆ. ಹೊಸ ಅವಕಾಶಗಳು ದೊರೆಯಲಿವೆ.
ಮೀನ: ಪಾಲುದಾರರ ಸಹಾಯದಿಂದ ಹೆಚ್ಚಿನ ಲಾಭದ ಅವಕಾಶಗಳನ್ನು ಪಡೆಯುತ್ತೀರಿ.

Articles You Might Like

Share This Article