ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(19-12-2022)

Social Share

ನಿತ್ಯ ನೀತಿ : ಯಾರನ್ನೂ ನಂಬಿ ಭೂಮಿಗೆ ಬಂದಿಲ್ಲ ಅಂದ್ಮೇಲೆ ಯಾರನ್ನೂ ನಂಬಿ ಜೀವನ ನಡೆಸುವ ಅವಶ್ಯಕತೆ ಇಲ್ಲ. ನಮಗೆ ಬೆಲೆ ಕೊಡದವರನ್ನು ಬಿಟ್ಟು ಬಿಡಬೇಕು. ಬೆಲೆ ಕೊಡೋರನ್ನು ಬೆಟ್ಟದಷ್ಟು ಪ್ರೀತಿ ಮಾಡಬೇಕು.
ಪಂಚಾಂಗ : ಸೋಮವಾರ, 19-12-2022
ಶುಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಚಿತ್ತಾ / ಮಳೆ ನಕ್ಷತ್ರ: ಮೂಲಾ
ಸೂರ್ಯೋದಯ : ಬೆ.06.36
ಸೂರ್ಯಾಸ್ತ : 05.58
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ಇಂದಿನ ರಾಶಿಭವಿಷ್ಯ :
ಮೇಷ:
ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ಆರೋಗ್ಯದಲ್ಲಿ ಏರುಪೇರಾಗಲಿದೆ.
ವೃಷಭ: ನೀವು ಮಾಡುವ ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ. ಅನಿರೀಕ್ಷಿತ ಧನಲಾಭವಾಗಲಿದೆ.
ಮಿಥುನ: ಉದ್ಯೋಗಾಕಾಂಕ್ಷಿಗಳಿಗೆ ಬಯಸಿದ ಕ್ಷೇತ್ರದಲ್ಲಿ ಅವಕಾಶ ದೊರೆಯಲಿದೆ.

ಕಟಕ: ಹಿರಿಯರ ಆಶೀರ್ವಾದ ಸದಾ ಕಾಲ ನಿಮ್ಮೊಂದಿಗಿರುತ್ತದೆ. ಉದ್ಯೋಗದಲ್ಲಿ ಲಾಭ ಸಿಗಲಿದೆ.
ಸಿಂಹ: ಸಂಸಾರದ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು. ಉತ್ತಮ ದಿನ.
ಕನ್ಯಾ: ಕುಟುಂಬದಲ್ಲಿ ಶುಭ ಸಮಾರಂಭಗಳು ನಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ತುಲಾ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ವೃಶ್ಚಿಕ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ. ಅಧಿಕಾರಿ ವರ್ಗಕ್ಕೆ ಉತ್ತಮ ದಿನ.
ಧನುಸ್ಸು: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.

ಮಕರ: ನಿಮ್ಮ ಎಲ್ಲ ಸಮಸ್ಯೆಗಳಿಗೂ ಹರಿಹಾರ ಸಿಗಲಿದೆ. ಮನೋಭಿಲಾಷೆ ವ್ಯಕ್ತಪಡಿಸಲು ಹಿಂಜರಿಯದಿರಿ.
ಕುಂಭ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.
ಮೀನ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.

#Horoscope, #KannadaHoroscope, #DailyHoroscope, #TodayHoroscope, #EesanjeHoroscope, #ಪಂಚಾಂಗ #ರಾಶಿಭವಿಷ್ಯ,

Articles You Might Like

Share This Article