ನಿತ್ಯ ನೀತಿ : ಯಾರಿಂದಲೂ ಏನನ್ನೂ ನಿರೀಕ್ಷಿಸದಿದ್ದರೆ ನೀವು ಎಂದಿಗೂ ನಿರಾಸೆಗೆ ಒಳಗಾಗುವ ಪ್ರಸಂಗವೇ ಬರುವುದಿಲ್ಲ.
# ಪಂಚಾಂಗ : ಗುರುವಾರ , 20-01-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ/ ನಕ್ಷತ್ರ: ಆಶ್ಲೇಷಾ/ ಮಳೆ ನಕ್ಷತ್ರ: ಉತ್ತರಾಷಾಢ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.15
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30
# ರಾಶಿಭವಿಷ್ಯ
ಮೇಷ: ಜವಾಬ್ದಾರಿಗಳನ್ನು ಪೂರಿಸಿ. ಖಂಡಿತ ವಾಗಿಯೂ ಉನ್ನತ ಮಟ್ಟಕ್ಕೆ ಏರುವಿರಿ.
ವೃಷಭ: ಉದ್ಯೋಗಸ್ಥರಿಗೆ ವಿಶೇಷ ಲಾಭದ ಅವಕಾಶಗಳು ಸಿಗಲಿವೆ. ಉತ್ತಮವಾದ ದಿನ.
ಮಿಥುನ: ಪೋಷಕರ ಸೇವೆಯನ್ನು ಆಸಕ್ತಿ ವಹಿಸಿ ಮಾಡುವುದರಿಂದ ತೊಂದರೆಗಳಿಂದ ಮುಕ್ತರಾಗುವಿರಿ.
ಕಟಕ: ಆದಾಯ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಚರ ಮತ್ತು ಸ್ಥಿರ ಆಸ್ತಿಯಲ್ಲಿಯೂ ಹೆಚ್ಚಳ ಕಂಡುಬರಲಿದೆ.
ಸಿಂಹ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಧಿಸಿತ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.
ಕನ್ಯಾ: ವಿದ್ಯಾರ್ಥಿಗಳು ಮತ್ತು ಉದ್ಯೋಗದಲ್ಲಿ ರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ.
ತುಲಾ: ಉದ್ಯೋಗ, ವ್ಯವಹಾರಕ್ಕೆ ಸಂಬಂಧಿಸಿದಂತೆ ಅಥವಾ ಯಾವುದೋ ಕಾರಣದಿಂದಾಗಿ ಸಂಗಾತಿಯಿಂದ ದೂರವಿರಬೇಕಾದ ಸಂದರ್ಭ ಬರಬಹುದು.
ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿ ವರ್ಗಕ್ಕೆ ಹತ್ತಿರವಾಗಿರುವುದರಿಂದ ಬಡ್ತಿ ಮತ್ತು ವೇತನ ಹೆಚ್ಚಳದ ರೂಪದಲ್ಲಿ ಲಾಭ ದೊರೆಯಲಿದೆ.
ಧನುಸ್ಸು: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೊಳಗಾಗಬಹುದು.
ಮಕರ: ಅನೇಕ ಸಮಸ್ಯೆಗಳ ನಡುವೆಯೂ ವ್ಯಾಪಾರ ಕ್ಷೇತ್ರದಲ್ಲಿ ಮುಂದುವರಿಯುತ್ತೀರಿ
ಕುಂಭ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಈ ದಿನ ಸುವರ್ಣಾವಕಾಶವಾಗಿದೆ.
ಮೀನ: ಹಣದ ಕೊರತೆ ಇರುವುದಿಲ್ಲ. ಕಠಿಣ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.
