ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-10-2021)

Spread the love

# ನಿತ್ಯ ನೀತಿ :
ಎಲ್ಲಿಯವರೆಗೆ ಭವ-ಬಂಧನಕ್ಕೆ ಅಂಟಿಕೊಂಡಿರುತ್ತೇವೋ ಅಲ್ಲಿಯವರೆಗೆ ದುಃಖ-ದುಮ್ಮಾನಗಳಿಂದ ದೂರಾಗಲು ಸಾಧ್ಯವಾಗುವುದಿಲ್ಲ.

# ಪಂಚಾಂಗ : ಬುಧವಾರ 20-10-2021
ಪ್ಲವನಾಮ ಸಂವತ್ಸವ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ/ ನಕ್ಷತ್ರ: ರೇವತಿ / ಮಳೆ ನಕ್ಷತ್ರ: ಚಿತ್ತಾ
# ಸೂರ್ಯೋದಯ : ಬೆ.06.11, ಸೂರ್ಯಾಸ್ತ : 05.58
# ರಾಹುಕಾಲ : 12.00-01.30 , ಯಮಗಂಡ ಕಾಲ: 7.30- 09.00, ಗುಳಿಕ ಕಾಲ -10.30-12.00

# ರಾಶಿ ಭವಿಷ್ಯ
ಮೇಷ: ಮನೆಯ ವಿಷಯಗಳು ಮತ್ತು ಬಾಕಿಯಿ ರುವ ಕೆಲಸಗಳನ್ನು ಪೂರೈಸಲು ಅನುಕೂಲಕರ ದಿನ.
ವೃಷಭ: ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷ ವನ್ನು ಹಾಳು ಮಾಡಬಹುದು. ಆಸಕ್ತಿ ದಾಯಕ ಪುಸ್ತಕ ಓದುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಿ.
ಮಿಥುನ: ಹೆಚ್ಚಾಗಿ ಧ್ಯಾನ ಮತ್ತು ಯೋಗ ಮಾಡುವುದರಲ್ಲಿ ಸಮಯ ಕಳೆಯುವುದರಿಂದ ಮಾನಸಿಕವಾಗಿ ಶಾಂತಿ ದೊರೆಯಲಿದೆ.

ಕಟಕ: ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಸಿಂಹ: ಕಚೇರಿಯಿಂದ ಮನೆಗೆ ಹಿಂತಿರುಗಿ ನಿಮ್ಮ ನೆಚ್ಚಿನ ಕೆಲಸವನ್ನು ಮಾಡುವುದರಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ.
ಕನ್ಯಾ: ಸ್ನೇಹಿತರು ಮತ್ತು ಸಂಬಂಗಳು ನಿಮಗೆ ಹಣದ ಸಹಾಯ ಮಾಡುವರು.

ತುಲಾ: ನೀವು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವುದನ್ನು ನೋಡಿ ಇತರರು ಸಂತೋಷಪಡುತ್ತಾರೆ. ಆರೋಗ್ಯ ಉತ್ತಮವಾಗಿರುತ್ತದೆ.
ವೃಶ್ಚಿಕ: ವಿದ್ಯಾರ್ಥಿಗಳು ಅನಾವಶ್ಯಕ ಕೆಲಸ ಮಾಡಿ ತಮ್ಮ ಅತ್ಯಮೂಲ್ಯ ಸಮಯ ವ್ಯರ್ಥ ಮಾಡುವರು.
ಧನುಸ್ಸು: ವೃತ್ತಿರಂಗದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ. ವ್ಯಾಪಾರ-ವ್ಯವಹಾರ ನಡೆಸುವವರಿಗೆ ಹಣದ ಹರಿವು ಉತ್ತಮವಾಗಿರುತ್ತದೆ.

ಮಕರ: ಹಿರಿಯರ ಬೆಂಬಲ ಮತ್ತು ಮೆಚ್ಚುಗೆ ನಿಮ್ಮ ಸ್ಥೈರ್ಯ ಹಾಗೂ ವಿಶ್ವಾಸವನ್ನು ಹೆಚ್ಚಿಸುತ್ತದೆ.
ಕುಂಭ: ಅತ್ತೆ ಮನೆ ಕಡೆಯವರಿಂದ ಕೆಟ್ಟ ಸುದ್ಧಿ ಕೇಳುವುದರಿಂದ ಮನಸ್ಸಿಗೆ ದುಃಖವಾಗುತ್ತದೆ.
ಮೀನ: ಹಣಕ್ಕೆ ಸಂಬಂಸಿದ ಸಮಸ್ಯೆಯ ಕಾರಣ ದಿಂದ ತೊಂದರೆಗೊಳಗಾಗುವ ಸಾಧ್ಯತೆಗಳಿವೆ.