ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-01-2022)

Social Share

ನಿತ್ಯ ನೀತಿ : ದೇಶ ದೊಡ್ಡದಾಗಬೇಕಾದರೆ ಊರಿನ ಜನ ದೊಡ್ಡವರಾಗಬೇಕು.
# ಪಂಚಾಂಗ : ಶುಕ್ರವಾರ, 21-01-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಮಘಾ / ಮಳೆ ನಕ್ಷತ್ರ: ಉತ್ತರಾಷಾಢ /
* ಸೂರ್ಯೋದಯ- ಬೆ.06.46
* ಸೂರ್ಯಾಸ್ತ – 06.16
* ರಾಹುಕಾಲ – 1.30-12.00
* ಯಮಗಂಡ ಕಾಲ – 3.00-4.30
* ಗುಳಿಕ ಕಾಲ – 7.30-9.00
# ರಾಶಿ ಭವಿಷ್ಯ
ಮೇಷ: ಬಿಡುವಿಲ್ಲದ ಕೆಲಸ-ಕಾರ್ಯಗಳಿದ್ದರೂ ಆರೋಗ್ಯ ಉತ್ತಮವಾಗಿರುತ್ತದೆ. ಆದರೂ ಅಸಡ್ಡೆ ತೋರದಿರಿ.
ವೃಷಭ: ಅನವಶ್ಯಕ ವಸ್ತುಗಳನ್ನು ಮಾತ್ರ ಖರೀದಿಸಿ ಅನಗತ್ಯ ಖರ್ಚು-ವೆಚ್ಚಗಳನ್ನು ಕಡಿಮೆ ಮಾಡುವಿರಿ.
ಮಿಥುನ: ಕುಟುಂಬ ಸದಸ್ಯರೊಂದಿಗೆ ಸಮಯ ಕಳೆ ಯಲು ಪ್ರಯತ್ನಿಸಿ. ಉತ್ತಮ ದಿನಚರಿ ಅಳವಡಿಸಿಕೊಳ್ಳಿ.
ಕಟಕ: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಮತ್ತು ಮೇಲಕಾರಿಗಳ ಸಹಕಾರ ಸಿಗಲಿದೆ.
ಸಿಂಹ: ಶಾಂತಿಯುತ ಮತ್ತು ಪ್ರಗತಿಪರ ದಿನವಾಗಿರುತ್ತದೆ. ಹಣವನ್ನು ಸಂತೋಷಕ್ಕಾಗಿ ಖರ್ಚು ಮಾಡುವಿರಿ.
ಕನ್ಯಾ: ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬಿಡುವಿಲ್ಲದ ದಿನವಾಗಿರುತ್ತದೆ.

ತುಲಾ: ಆರ್ಥಿಕ ವಿಷಯ ಗಳಲ್ಲಿ ಅನುಕೂಲಕರ ದಿನವಾಗಿರುತ್ತದೆ. ಮನಸ್ಸನ್ನು ಶಾಂತವಾಗಿಟ್ಟುಕೊಂಡರೆ ಖರ್ಚು ನಿಯಂತ್ರಿಸಬಹುದು.
ವೃಶ್ಚಿಕ: ಪ್ರತಿಯೊಂದು ಸಮಸ್ಯೆಗಳಿಗೂ ಶಾಂತಿ, ಸಂಯಮದಿಂದ ಪರಿಹಾರ ಕಂಡುಕೊಳ್ಳಬಹುದು.
ಧನುಸ್ಸು: ಅನಗತ್ಯ ಖರ್ಚುಗಳು ಹೆಚ್ಚಾಗಬಹುದು, ಆದ್ದರಿಂದ ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ.
ಮಕರ: ಕುಟುಂಬದಲ್ಲಿ ಯಾರಾದರೂ ಅನಾರೋಗ್ಯ ದಿಂದ ಬಳಲುತ್ತಿದ್ದರೆ ಅವರ ಬಗ್ಗೆ ವಿಶೇಷ ಗಮನ ನೀಡಿ.
ಕುಂಭ: ಗುರುಗಳ ಸಹಕಾರದಿಂದÀ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿವೆ.
ಮೀನ: ಉದ್ಯಮಿಗಳು, ವ್ಯಾಪಾರಸ್ಥರು ಹಿಂದೆ ಮಾಡಿದ ಯೋಜನೆಗಳಿಂದ ಲಾಭ ಗಳಿಸಬಹುದು.

Articles You Might Like

Share This Article