ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-02-2022)

Social Share

ನಿತ್ಯನೀತಿ : ಯಾರೋ ನಿಮ್ಮನ್ನು ತಿರಸ್ಕರಿಸಿದರೆಂದು ದುಃಖಿಸಬೇಡಿ. ಏಕೆಂದರೆ ದುಬಾರಿಯಾದುದನ್ನು ಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ ಮತ್ತು ಎಲ್ಲವೂ ಎಲ್ಲರಿಗೆ ಸಿಗಲು ಸಾಧ್ಯವಿಲ್ಲ.
ಪಂಚಾಂಗ : ಮಂಗಳವಾರ, 22-02-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ /
ತಿಥಿ: ಷಷ್ಠಿ / ನಕ್ಷತ್ರ: ಸ್ವಾತಿ / ಮಳೆ ನಕ್ಷತ್ರ: ಶತಭಿಷ /
* ಸೂರ್ಯೋದಯ : ಬೆ.06.39
* ಸೂರ್ಯಾಸ್ತ : 06.27
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00
# ರಾಶಿಭವಿಷ್ಯ :
* ಮೇಷ: ಮಹತ್ತರ ಕೆಲಸ ಸಾಸುವಲ್ಲಿ ಸಫಲರಾಗು ವಿರಿ. ಕುಟುಂಬದ ಸುಖ ಸಂತೋಷ ಸಿಗಲಿದೆ.
* ವೃಷಭ: ವಿಶೇಷ ವ್ಯಕ್ತಿಯೊಂದಿಗಿನ ಭೇಟಿ ಸ್ಮರಣೀಯ ವಾಗಿರುತ್ತದೆ. ಹೊಸ ಉತ್ಸಾ ಮೂಡುವುದು.
* ಮಿಥುನ: ಪ್ರೇಮ ಸಂಬಂಧಗಳಲ್ಲಿ ಯಶಸ್ಸು ಸಿಗಲಿದೆ. ಇಂದು ಶುಭ ದಿನವಾಗಲಿದೆ.
* ಕಟಕ: ಒಳ್ಳೆಯ ಜನರೊಂದಿಗೆ ಸಂಪರ್ಕ ಹೊಂದುವಿರಿ. ಕೆಲಸದಲ್ಲಿ ಯಶಸ್ಸು ಸಾಸಲು ನಿಮಗೆ ಸಹಾಯ ಮತ್ತು ಮಾರ್ಗದರ್ಶನ ನೀಡುವರು.
* ಸಿಂಹ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸಿನೊಂದಿಗೆ ಲಾಭ ಸಿಗಲಿದೆ ಹಾಗೂ ಪ್ರಶಂಸೆಗೆ ಅರ್ಹರಾಗುತ್ತೀರಿ.
* ಕನ್ಯಾ: ಸ್ನೇಹಿತರು ಅಥವಾ ಕುಟುಂಬದೊಂದಿಗೆ ಉತ್ತಮ ಪ್ರವಾಸ ಕೈಗೊಂಡು ಪರಸ್ಪರ ಮಾತನಾಡಿಕೊಂಡು ಸಮಯ ಕಳೆಯುತ್ತೀರಿ.
* ತುಲಾ: ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಯಶಸ್ಸು ಸಾಸುವಿರಿ. ನಿಮ್ಮ ಇಚ್ಛೆಯಂತೆ ಕೆಲವು ಯೋಜನೆಗಳನ್ನು ಪೂರ್ಣಗೊಳಿಸುವಿರಿ.
* ವೃಶ್ಚಿಕ: ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವಿರಿ.
* ಧನುಸ್ಸು: ಸುತ್ತಾಡಲು ಹೊರಗೆ ಹೋಗುವುದರಿಂದ ಮನಸ್ಸಿಗೆ ಬಹಳಷ್ಟು ಮನರಂಜನೆ ಸಿಗಲಿದೆ.
* ಮಕರ: ಕಠಿಣ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸು ದೊರೆಯಲಿದೆ. ವಿದ್ಯಾಭ್ಯಾಸಕ್ಕೆ ಉತ್ತಮ ದಿನ.
* ಕುಂಭ: ಸಂಗಾತಿಯೊಂದಿಗೆ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳುವುದು ಒಳಿತು.
* ಮೀನ: ವೃತ್ತಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳಾ ಗಬಹುದು. ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ.

Articles You Might Like

Share This Article