ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-02-2022)

Social Share

ನಿತ್ಯನೀತಿ : ಎಡವಿದಾಗಲೇ ನಡೆಯುತ್ತಿದ್ದೇವೆಂದು ಖಾತ್ರಿಯಾಗೋದು. ಹಾಗೆಯೇ ನಿಂದನೆಯ ಕಲ್ಲುಗಳು ಬಿದ್ದಾಗಲೇ ಮುನ್ನುಗ್ಗುತ್ತಿರುವ ಅರಿವು ಮೂಡುವುದು.
ಪಂಚಾಂಗ : ಬುಧವಾರ , 23-02-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ವಿಶಾಖಾ / ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.39
* ಸೂರ್ಯಾಸ್ತ : 06.27
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00
# ರಾಶಿಭವಿಷ್ಯ :
ಮೇಷ: ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳಿ ಮತ್ತು ಎಚ್ಚರಿಕೆಯಿಂದ ಮಾಡಿ.
ವೃಷಭ: ವ್ಯವಹಾರದಲ್ಲಿನ ನಿಮ್ಮ ನಿರ್ಧಾರಗಳು ಲಾಭ ತಂದುಕೊಡಲು ಕಾರಣವಾಗುತ್ತವೆ. ಹಿರಿಯ ಅಧಿಕಾರಿಗಳು ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಸುವರು.
ಮಿಥುನ: ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಅತ್ತಿಗೆಯಿಂದ ಲಾಭವಾಗಲಿದೆ.
ಕಟಕ: ತಂದೆಯ ಮಾರ್ಗ ದರ್ಶನದೊಂದಿಗೆ, ನಿಮಗೆ ಅಂಟಿಕೊಂಡಿರುವ ಎಲ್ಲಾ ಕೆಲಸ-ಕಾರ್ಯಗಳು ಪೂರ್ಣಗೊಳ್ಳುತ್ತವೆ.
ಸಿಂಹ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.
ಕನ್ಯಾ: ನಿಮ್ಮ ಕೆಲಸದ ಸ್ಥಳದಲ್ಲಿ ಸ್ವಲ್ಪ ಕಷ್ಟ ಅನುಭವಿ ಸುತ್ತೀರಿ. ಕುಟುಂಬದ ಖರ್ಚುಗಳನ್ನು ನಿಯಂತ್ರಿಸುವ ಅವಶ್ಯಕತೆ ಇರುತ್ತದೆ.
ತುಲಾ: ಹಿಂದೆ ನೀಡಿದ ಹಣವನ್ನು ನಿಮ್ಮ ಸ್ನೇಹಿತರು ಹಿಂದಿರುಗಿಸುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಅದೃಷ್ಟ ನಿಮ್ಮ ಕಡೆಗಿದೆ.
ವೃಶ್ಚಿಕ: ಮುಂಬರುವ ದಿನಗಳನ್ನು ಗಮನದಲ್ಲಿಟ್ಟು ಕೊಂಡು ಬಟ್ಟೆ, ಆಭರಣ ಇತ್ಯಾದಿಗಳನ್ನು ಖರೀದಿಸಿ
ಧನುಸ್ಸು: ಹೊಸ ವ್ಯಾಪಾರ ಆರಂಭಿಸಲು ಸಮಯ ಅನುಕೂಲಕರವಾಗಿದೆ. ಗೌರವ ಹೆಚ್ಚಾಗುತ್ತದೆ.
ಮಕರ: ಪೋಷಕರ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ ಮತ್ತು ವೈದ್ಯರ ಸಲಹೆ ಪಡೆಯಿರಿ
ಕುಂಭ: ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಒಳಿತು.
ಮೀನ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.

Articles You Might Like

Share This Article