ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-10-2021)

# ನಿತ್ಯ ನೀತಿ :
ಮನುಷ್ಯ ಎಷ್ಟೇ ಬಲಶಾಲಿ ಯಾದರೂ ದೌರ್ಬಲ್ಯ ಮೂಡಿದಲ್ಲಿ ಏನನ್ನೂ ಸಾಸ ಲಾಗದು. ಪ್ರಯತ್ನಶೀಲನಾದಾಗ ಮಾತ್ರ ಉದ್ದಿಷ್ಟ ಗುರಿಯನ್ನು ಮುಟ್ಟಲು ಸಾಧ್ಯ.

# ಪಂಚಾಂಗ : ಶನಿವಾರ 23-10-2021
ಪ್ಲವನಾಮ ಸಂವತ್ಸವ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ/ ನಕ್ಷತ್ರ: ಕೃತ್ತಿಕಾ/ ಮಳೆ ನಕ್ಷತ್ರ: ಚಿತ್ತಾ
# ಸೂರ್ಯೋದಯ : ಬೆ.06.12, ಸೂರ್ಯಾಸ್ತ : 05.57
# ರಾಹುಕಾಲ : 09.00-10.30 , ಯಮಗಂಡ ಕಾಲ: 01.30- 03.00, ಗುಳಿಕ ಕಾಲ -06.00-07.30

# ರಾಶಿ ಭವಿಷ್ಯ

ಮೇಷ: ಹಣಕಾಸು ಪರಿಸ್ಥಿತಿ ಅನಿರೀಕ್ಷಿತ ರೀತಿಯಲ್ಲಿ ಸುಧಾರಿಸುತ್ತದೆ. ಮಾನಸಿಕವಾಗಿ ದೃಢತೆಯಿಂದಿರಿ.
ವೃಷಭ: ದುಂದುವೆಚ್ಚ ಮಾಡುವುದಲ್ಲಿ ನಿಲ್ಲಿಸಿ. ಕೆಲಸದಲ್ಲಿ ಏನಾದರೂ ಸಾಧಿಸಿ ತೋರಿಸಿ.
ಮಿಥುನ: ಸಾಮಾಜಿಕ ಕೂಟಗಳಲ್ಲಿ ಭಾಗವಹಿಸು ವುದರಿಂದ ನಿಮ್ಮ ಜಯಪ್ರಿಯತೆ ಹೆಚ್ಚಲಿದೆ.

ಕಟಕ: ಜೀವನ ಸಂಗಾತಿ ನಿಮ್ಮ ಮನಸ್ಥಿತಿಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗುತ್ತಾರೆ.
ಸಿಂಹ: ಹಳೆ ಸ್ನೇಹಿತರ ಭೇಟಿ ಯಿಂದ ಕೆಲವು ಸಮಸ್ಯೆಗಳಿಗೆ ಪರಿಹಾರಗಳು ದೊರೆಯಲಿವೆ.
ಕನ್ಯಾ: ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳ ಬೆಂಬಲ ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.

ತುಲಾ: ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಅಪರಿಚಿತ ವ್ಯಕ್ತಿಯೊಂದಿಗೆ ಯಾವುದೇ ರೀತಿಯ ವ್ಯವಹಾರ ಮಾಡದಿರಿ.
ವೃಶ್ಚಿಕ: ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ.
ಧನುಸ್ಸು: ಸಂಗಾತಿಯ ತಿಳುವಳಿಕೆಯಿಂದ ಮನೆ ಯಲ್ಲಿ ಸಂತೋಷ-ಶಾಂತಿ ಮತ್ತು ಸಮೃದ್ಧಿ ಉಂಟಾ ಗುತ್ತದೆ. ಮನೆಯವರೊಂದಿಗೆ ಕಾಲ ಕಳೆಯಿರಿ.

ಮಕರ: ಕ್ರೀಡೆಗಳು ಮತ್ತು ಇತರ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕಳೆದು ಕೊಂಡಿದ್ದ ಚೈತನ್ಯ ಸಂಗ್ರಹಿಸಲು ಸಹಾಯವಾಗಲಿದೆ.
ಕುಂಭ: ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಆರೋಗ್ಯ ಉತ್ತಮವಾಗಿರುತ್ತದೆ.
ಮೀನ: ಗೃಹಿಣಿಯರು ಬಿಡುವಿನ ಸಮಯವನ್ನು ಟಿವಿ, ಮೊಬೈಲ್ ವೀಕ್ಷಿಸುವುದಲ್ಲಿ ಕಳೆಯುವರು.