ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-02-2022)

Social Share

ನಿತ್ಯನೀತಿ : ತೂಕದ ಮಾತು ಕ್ಷಮಿಸು ಎಂಬ ಶಬ್ಧ. ನೀನು ತಪ್ಪು ಮಾಡಿದಾಗ ಬಳಸಬಹುದೇ ಹೊರತು ನೀನು ಇನ್ನೊಬ್ಬರಿಗೆ ವಿಶ್ವಾಸ ದ್ರೋಹ ಮಾಡಿದ ಸಂದರ್ಭದಲ್ಲಿ ಅಲ್ಲ.
ಪಂಚಾಂಗ : ಗುರುವಾರ , 24-02-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ/ ನಕ್ಷತ್ರ: ಅನುರಾಧಾ/ ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.38
* ಸೂರ್ಯಾಸ್ತ : 06.28
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30
# ರಾಶಿಭವಿಷ್ಯ :
ಮೇಷ: ಉದ್ಯೋಗಾಕಾಂಕ್ಷಿಗಳು ಉತ್ತಮ ಫಲಿತಾಂಶ ಪಡೆಯುವರು. ನಿಮ್ಮ ಇಚ್ಛೆಯಂತೆ ಕೆಲಸಗಳನ್ನು ಪೂರ್ಣಗೊಳಿಸುವಿರಿ.
ವೃಷಭ: ಆರ್ಥಿಕವಾಗಿ ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಮಿಥುನ: ಪ್ರತಿಯೊಂದು ಕೆಲಸವನ್ನು ಚಾಣಾಕ್ಷತೆಯಿಂದ ಅತ್ಯಂತ ಸುಲಭವಾಗಿ ಪೂರ್ಣಗೊಳಿಸುವಿರಿ.
ಕಟಕ: ಸ್ವಲ್ಪ ಪ್ರಯತ್ನದಿಂದ ಅಥವಾ ಶ್ರಮವಿಲ್ಲದೆ ಹಣ ಸಿಗುವ ಸಾಧ್ಯತೆಗಳಿವೆ.
ಸಿಂಹ: ಪೋಷಕರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು.
ಕನ್ಯಾ: ಅತಿಥಿಗಳ ಆಗಮನದಿಂದ ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ.
ತುಲಾ: ಗುರು-ಹಿರಿಯರ ಬಗ್ಗೆ ಗೌರವ ಮತ್ತು ಆತಿಥ್ಯ ಭಾವನೆ ಹೆಚ್ಚಾಗುತ್ತದೆ.
ವೃಶ್ಚಿಕ: ಯಾರೊಂದಿಗಾದರೂ ಅನಗತ್ಯ ಜಗಳಗಳು ಉಂಟಾಗುತ್ತವೆ. ಎಚ್ಚರಿಕೆಯಿಂದಿರಿ.
ಧನುಸ್ಸು: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಇದ್ದಕ್ಕಿದ್ದಂತೆ ವೆಚ್ಚಗಳು ಹೆಚ್ಚಲಿವೆ.
ಮಕರ: ವೃತ್ತಿಯಲ್ಲಿರುವವರು ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೀರಿ.
ಕುಂಭ: ಕೌಟುಂಬಿಕ ಜೀವನ ಸುಖಮಯವಾಗಿರು ತ್ತದೆ. ನಿರ್ಗತಿಕರಿಗೆ ಸಹಾಯ ಮಾಡಿ.
ಮೀನ: ಶತ್ರುಗಳು ಅಪತ್ಯ ಸಾಧಿಸಬಹುದು. ದೇಹದಲ್ಲಿ ಚುರುಕುತನ ಇರುತ್ತದೆ.

Articles You Might Like

Share This Article