ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-05-2022)

Spread the love

ನಿತ್ಯ ನೀತಿ : ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.

# ಪಂಚಾಂಗ : ಮಂಗಳವಾರ , 24.-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಕೃಷ್ಣ ಪಕ್ಷ / ತಿಥಿ: ದಶಮಿ/ ನಕ್ಷತ್ರ: ಉತ್ತರಾಭಾದ್ರ/ಮಳೆ ನಕ್ಷತ್ರ: ಕೃತ್ತಿಕಾ

* ಸೂರ್ಯೋದಯ : ಬೆ.5.53
* ಸೂರ್ಯಾಸ್ತ : 06.41
* ರಾಹುಕಾಲ : 3.00-4.30
* ಯಮಗಂಡ ಕಾಲ : 9.00-10.30
* ಗುಳಿಕ ಕಾಲ : 12.00-1.30

# ಇಂದಿನ ರಾಶಿ ಭವಿಷ್ಯ : 
ಮೇಷ: ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಅತ್ತಿಗೆಯಿಂದ ಲಾಭವಾಗಲಿದೆ.
ವೃಷಭ: ನಿಮ್ಮ ಶ್ರಮ ಮತ್ತು ಅದೃಷ್ಟವು ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.
ಮಿಥುನ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.

ಕಟಕ: ವ್ಯವಹಾರದಲ್ಲಿನ ನಿಮ್ಮ ನಿರ್ಧಾರಗಳು ಲಾಭ ತಂದುಕೊಡಲು ಕಾರಣವಾಗುತ್ತವೆ.
ಸಿಂಹ: ಹಿರಿಯ ಅಧಿಕಾರಿಗಳು, ಕುಟುಂಬ ದವರು ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಸುವರು.
ಕನ್ಯಾ: ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.

ತುಲಾ: ಯೋಜಿತ ರೀತಿ ಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.
ವೃಶ್ಚಿಕ: ಅನೇಕ ಆರ್ಥಿಕ ಲಾಭ ಪಡೆಯುವಿರಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.
ಧನುಸ್ಸು: ನಿಮ್ಮ ಜನಪ್ರಿಯತೆ ಉತ್ತುಂಗದಲ್ಲಿರುತ್ತದೆ ಮತ್ತು ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುವಿರಿ.

ಮಕರ: ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಮನ್ನಣೆ ಗಳಿಸುವಿರಿ.
ಕುಂಭ: ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಪ್ರಭಾವಿ ವ್ಯಕ್ತಿಯ ಭೇಟಿ ಮಾಡುವಿರಿ.
ಮೀನ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ.

Facebook Comments