ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-01-2022)

Social Share

ನಿತ್ಯ ನೀತಿ : ಎಲ್ಲರನ್ನೂ ಪ್ರೀತಿಸು. ಕೆಲವರನ್ನಷ್ಟೇ ನಂಬು. ಯಾರಿಗೂ ಕೇಡು ಬಗೆಯಬೇಡ. ಇದುವೇ ಜೀವನದ ನಿಜ ಸೂತ್ರ.
# ಪಂಚಾಂಗ : ಮಂಗಳವಾರ , 24-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ಏಕಾದಶಿ| ನಕ್ಷತ್ರ: ಅಷ್ಟಮಿ| ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.18
* ರಾಹುಕಾಲ : 3.00-4.30
* ಯಮಗಂಡ ಕಾಲ : 9.00-10.30
* ಗುಳಿಕ ಕಾಲ : 12.00-1.30
# ರಾಶಿಭವಿಷ್ಯ 
ಮೇಷ: ಕೆಲವು ಕಾರಣಗಳಿಂದ ತೊಂದರೆಗೊಳಗಾಗಬಹುದು. ಪೋಷಕರ ಆಶೀರ್ವಾದ ಪಡೆಯಿರಿ.
ವೃಷಭ: ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸದಿರು ವುದು ಒಳ್ಳೆಯದು. ಆತ್ಮವಿಶ್ವಾಸದಿಂದಿರಿ.
ಮಿಥುನ: ಆತುರದ ನಿರ್ಧಾರ ಕೈಗೊಳ್ಳುವುದರಿಂದ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.
ಕಟಕ: ಕಚೇರಿ ಕೆಲಸ-ಕಾರ್ಯಗಳ ಕಡೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ.
ಸಿಂಹ: ಹಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ವೆಚ್ಚ ಹೆಚ್ಚಾಗಬಹುದು.
ಕನ್ಯಾ: ವಿವಾಹಿತರಿಗೆ ವೈವಾಹಿಕ ಜೀವನದಲ್ಲಿ ಒಂದು ಮಹತ್ವದ ದಿನವಾಗಬಹುದು.
ತುಲಾ: ಕೆಲಸದ ಬಗ್ಗೆ ತುಂಬಾ ಚಿಂತೆ ಮಾಡುವಿರಿ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ತೊಂದರೆ ಎದುರಿಸಬೇಕಾಗಬಹುದು.
ವೃಶ್ಚಿಕ: ಮೇಲಧಿಕಾರಿಗಳು ನಿಮ್ಮನ್ನು ಕಟ್ಟುನಿಟ್ಟಾಗಿ ನಡೆಸಿಕೊಳ್ಳುವರು. ಅತ್ಯಂತ ಎಚ್ಚರಿಕೆಯಿಂದಿರಿ.
ಧನುಸ್ಸು: ಯಾವುದೇ ನಿರೀಕ್ಷಿತ ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ.
ಮಕರ: ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಯಶಸ್ಸು ಪಡೆಯುವಿರಿ. ಕೆಲಸ-ಕಾರ್ಯಗಳಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಲಿದೆ.
ಕುಂಭ: ನುರಿತ ಜನರ ಸಹವಾಸವು ಹೆಚ್ಚು ಲಾಭದಾಯಕವಾಗಿ ಪರಿಣಮಿಸಲಿದೆ.
ಮೀನ: ಮಕ್ಕಳು, ಕುಟುಂಬದವರ ಸಂತೋಷ ದಿಂದ ಹೆಚ್ಚು ನೆಮ್ಮದಿ ದೊರೆಯುತ್ತದೆ.

Articles You Might Like

Share This Article