ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-02-2022)

Social Share

ನಿತ್ಯನೀತಿ : ಎಲ್ಲಾ ನನ್ನವರೇ ಎಂದುಕೊಂಡು ಹೋದೆ. ಆದರೆ ಕಾಲವೇ ತಿಳಿಸಿತು. ನೀನು ಹುಡುಕಿಕೊಂಡು ಹೋದವರು ಯಾರೂ ನಿನ್ನವರಲ್ಲ. ನಿನ್ನನ್ನು ಯಾರು ಹುಡುಕಿಕೊಂಡು ಬರುತ್ತಾರೋ ಅವರು ಮಾತ್ರ ನಿನ್ನವರು ಎಂದು.
ಪಂಚಾಂಗ : ಶುಕ್ರವಾರ, 25-02-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ/ ನಕ್ಷತ್ರ: ಜ್ಯೇಷ್ಠ/ ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.38
* ಸೂರ್ಯಾಸ್ತ : 06.28
* ರಾಹುಕಾಲ : 1.30-12.00
* ಯಮಗಂಡ ಕಾಲ : 3.00-4.30
* ಗುಳಿಕ ಕಾಲ : 7.30-9.00
# ರಾಶಿಭವಿಷ್ಯ :
ಮೇಷ: ವ್ಯಾಪಾರದಲ್ಲಿ ಅಧಿಕ ಲಾಭ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.
ವೃಷಭ: ಮನಸ್ಸು ಸಂತೋಷದಿಂದ ಇರುತ್ತದೆ. ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡಲು ಬಯಸುವವರಿಗೆ ಇಂದು ಉತ್ತಮ ದಿನವಾಗಿದೆ.
ಮಿಥುನ: ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆ ಯಲು ಬಯಸುವಿರಿ. ನಿರ್ಗತಿಕರಿಗೆ ಸಹಾಯ ಮಾಡಿ.
ಕಟಕ: ವ್ಯಾಪಾರಿಗಳು ಅಥವಾ ವೃತ್ತಿಯಲ್ಲಿರುವವರು ಅಧಿಕೃತ ಪ್ರಯಾಣ ಕೈಗೊಳ್ಳಬೇಕಾಗುತ್ತದೆ.
ಸಿಂಹ: ಕೌಟುಂಬಿಕ ಮತ್ತು ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ.
ಕನ್ಯಾ: ವಿವಿಧ ಕ್ಷೇತ್ರ ಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ತುಲಾ: ವಿವಾಹಿತರು ಉತ್ತಮ ದಾಂಪತ್ಯ ಜೀವನವನ್ನು ಆನಂದಿಸುವರು. ವೈವಾಹಿಕ ಜೀವನದಲ್ಲಿ ಹೊಸತನ ಉಂಟಾಗುತ್ತದೆ.
ವೃಶ್ಚಿಕ: ಆರ್ಥಿಕ ವಿಷಯಗಳಲ್ಲಿ ಅನುಕೂಲಕರ ವಾಗಿರುತ್ತದೆ. ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಬೆಳೆಸುವಲ್ಲಿ ಯಶಸ್ವಿಯಾಗುವಿರಿ.
ಧನುಸ್ಸು: ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದು ಕೊಳ್ಳದಿರಿ.ಪ್ರೇಮ ಸಂಬಂಧದಲ್ಲಿ ಸೂಕ್ಷ್ಮತೆ ಇರಲಿದೆ.
ಮಕರ: ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಚಿಂತನಶೀಲರಾಗಿ ಮಾತನಾಡುವಿರಿ.
ಕುಂಭ: ಸ್ಥಗಿತಗೊಂಡ ಕೆಲಸಗಳು ಮುಂದುವರಿ ಯಲಿವೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಮೀನ: ನಿಮ್ಮ ಶ್ರಮ ಮತ್ತು ಅದೃಷ್ಟವು ಎಲ್ಲಾ ರೀತಿಯಲ್ಲೂ ಬೆಂಬಲ ನೀಡುತ್ತದೆ.

Articles You Might Like

Share This Article