ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-05-2022)

Spread the love

ನಿತ್ಯ ನೀತಿ : ಯಶಸ್ವಿಯಾಗುವ ನಿರ್ಣಯವು ಸಾಕಷ್ಟು ಬಲವಾಗಿದ್ದರೆ ವಿಫಲತೆ ಏನೂ ಮಾಡಲಾರದು.

# ಪಂಚಾಂಗ : ಬುಧವಾರ, 25.-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಕೃಷ್ಣ ಪಕ್ಷ / ತಿಥಿ: ದಶಮಿ/ ನಕ್ಷತ್ರ: ಉತ್ತರಾಭಾದ್ರ/ಮಳೆ ನಕ್ಷತ್ರ: ರೋಹಿಣಿ

* ಸೂರ್ಯೋದಯ : ಬೆ.5.53
* ಸೂರ್ಯಾಸ್ತ : 06.41
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00

# ಇಂದಿನ ರಾಶಿ ಭವಿಷ್ಯ : 
ಮೇಷ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವಿರಿ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ.
ವೃಷಭ: ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳು ವುದು ಅಗತ್ಯವಾಗಿರುತ್ತದೆ.
ಮಿಥುನ: ನಿಮ್ಮ ಪ್ರೀತಿಪಾತ್ರ ರೊಂದಿಗೆ ಪ್ರಯಾಣಿಸಲು ಅವಕಾಶಗಳು ಸಿಗುತ್ತದೆ.

ಕಟಕ: ಸಂಗಾತಿಯೊಂದಿಗೆ ಹಣಕಾಸಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಿರಿ.
ಸಿಂಹ: ಆಸ್ತಿ, ಅಪಾರ್ಟ್ ಮೆಂಟ್ ಖರೀದಿಯಲ್ಲಿ ಅಧಿಕ ಹಣ ಹೂಡಿಕೆ ಮಾಡುವಿರಿ.
ಕನ್ಯಾ: ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳದಿರಿ.

ತುಲಾ: ವೈಯಕ್ತಿಕ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸುವುದನ್ನು ಬಿಡಿ.
ವೃಶ್ಚಿಕ: ಹಣದ ಕೊರತೆ ಇರುವುದಿಲ್ಲ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಧನುಸ್ಸು: ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿ ಗಳಿಂದ ಸಲಹೆಗಳು ಮತ್ತು ಸಹಾಯ ಸಿಗಲಿದೆ.

ಮಕರ: ಮಹಿಳೆಯರಿಗೆ ಉತ್ತಮ ಅವಕಾಶಗಳು ಸಿಗಲಿವೆ. ದುಷ್ಟ ಜನರಿಂದ ದೂರಿವಿರಿ.
ಕುಂಭ: ನೀವು ನೀಡುವ ಸಲಹೆಗಳು ಇತರರಿಗೆ ಉಪಯುಕ್ತವಾಗುತ್ತವೆ. ಇಡೀ ದಿನ ಉತ್ಸಾಹದಿಂದಿರುವಿರಿ.
ಮೀನ: ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯವನ್ನು ಕಳೆಯುವಿರಿ.

Facebook Comments