ನಿತ್ಯ ನೀತಿ : ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯು ವವರು ದೊಡ್ಡವರಾಗುವುದಿಲ್ಲ..! ಬಿದ್ದ ವ್ಯಕ್ತಿಯನ್ನು ಕೈ ಹಿಡಿದು ಎತ್ತುವವರು ದೊಡ್ಡವರಾಗುತ್ತಾರೆ..!
# ಪಂಚಾಂಗ : ಬುಧವಾರ , 26-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ನವಮಿ| ನಕ್ಷತ್ರ: ಸ್ವಾತಿ | ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.18
* ರಾಹುಕಾಲ : 12.00-1.30
* ಯಮಗಂಡ ಕಾಲ : 7.30-9.00
* ಗುಳಿಕ ಕಾಲ : 10.30-12.00
# ರಾಶಿಭವಿಷ್ಯ
ಮೇಷ: ಹಣದ ಖರ್ಚನ್ನು ಸಂಭಾಳಿಸುವುದರಲ್ಲಿ ಹೈರಾಣಾಗುತ್ತೀರಿ.ಆರೋಗ್ಯ ಸಮಸ್ಯೆಯೂ ಕಾಡಬಹುದು.
ವೃಷಭ: ಆಸ್ತಿ ಮಾರಾಟ ಮಾಡಬೇಕು ಎಂದಿದ್ದಲ್ಲಿ ಅದು ಸಾಧ್ಯವಾಗಲಿದೆ. ಆದರೆ ಸೋದರ ಸಂಬಂಗಳೇ ಸಮಸ್ಯೆಯಾಗಬಹುದು.
ಮಿಥುನ: ಕೆಲವು ಜವಾಬ್ದಾರಿಗಳನ್ನು ನಿರ್ವಹಿಸು ವುದು ಸವಾಲಾಗಿ ಪರಿಣಮಿಸಲಿದೆ. ಯಾವುದೇ ಕಾರಣಕ್ಕೂ ಇತರರ ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ.
ಕಟಕ: ಯಾವುದಾದರೂ ಒಂದು ವಿಚಾರವಾಗಿ ಚಿಂತೆ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಮಹಿಳೆಯರು ಸಂಸಾರದ ಗುಟ್ಟನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ.
ಸಿಂಹ: ಅಂದುಕೊಳ್ಳದ ರೀತಿ ಯಲ್ಲಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ. ನಾನಾ ಬಗೆಯ ಚಿಂತೆ- ಬೇಸರ ಕಾಡಲಿದೆ.
ಕನ್ಯಾ: ಕೆಲವು ಅಪೂರ್ಣಗೊಂಡಿರುವ ಕೆಲಸಗಳನ್ನು ಈ ದಿನ ಪ್ರಾಮಾಣಿಕವಾಗಿ ಪೂರ್ಣಗೊಳಿಸುವಿರಿ.
ತುಲಾ: ಹಣಕಾಸು ವಿಷಯದಲ್ಲಿ ಅದೃಷ್ಟ ನಿಮ್ಮ ಕಡೆಗಿರುತ್ತದೆ. ರುಚಿಕರವಾದ ಆಹಾರ ಸೇವಿಸುವಿರಿ.
ವೃಶ್ಚಿಕ: ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ.
ಧನುಸ್ಸು: ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರುವಂತಹ ಯಾವುದೇ ಕೆಲಸ ಮಾಡದಂತೆ ಎಚ್ಚರಿಕೆ ವಹಿಸಿರಿ.
ಮಕರ: ಧಾರ್ಮಿಕ ಚಟುವಟಿಕೆಗಳು ಮತ್ತು ಉನ್ನತ ತಂತ್ರಜ್ಞಾನದ ಕಡೆಗೆ ಒಲವು ಹೆಚ್ಚಾಗುತ್ತದೆ.
ಕುಂಭ: ಏನಾದರೂ ಹೊಸ ಕೆಲಸ ಮಾಡಬೇಕೆಂಬ ಆಲೋಚನೆಯಲ್ಲಿ ತೊಡಗಿರುವಿರಿ.
ಮೀನ: ಸಂಗಾತಿಯೊಂದಿಗೆ ವಿವಾದಾತ್ಮಕ ವಿಷಯಗಳನ್ನು ಚರ್ಚಿಸುವುದನ್ನು ತಪ್ಪಿಸಿ.
