ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-02-2022)

Social Share

ನಿತ್ಯನೀತಿ : ಮಾತಿನ ವರ್ತನೆ ಹೇಳುತ್ತದೆ ಮನುಷ್ಯ ಹೇಗೆ ಅಂತ. ವಾದಿಸುವ ವರ್ತನೆ ಹೇಳುತ್ತದೆ ಅವನ ಜ್ಞಾನ ಎಷ್ಟು ಅಂತ. ಅಹಂಕಾರ ಹೇಳುತ್ತದೆ ಅವನ ಬಳಿ ಇರುವ ಧನ ಎಷ್ಟು ಅಂತ. ಸಂಸ್ಕಾರ ಹೇಳುತ್ತದೆ ಅವರ ಮನೆತನ ಹೇಗಿದೆ ಅಂತ.
ಪಂಚಾಂಗ : ಶನಿವಾರ , 26-02-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ/ ನಕ್ಷತ್ರ: ಮೂಲಾ/ ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.37
* ಸೂರ್ಯಾಸ್ತ : 06.28
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30
# ರಾಶಿಭವಿಷ್ಯ :
ಮೇಷ: ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.
ವೃಷಭ: ಅಧ್ಯಯನದ ಅಭ್ಯಾಸ ಮಾಡುವಾಗ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು.
ಮಿಥುನ: ಬೆನ್ನು ನೋವು ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಕಾರಣ ನೀವು ಕೆಲವು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಕಟಕ: ಕುಟುಂಬ ಸದಸ್ಯರೊಂದಿಗೆ ಜಗಳ ವಾಡುವ ಸಂದರ್ಭ ಎದುರಾಗಬಹುದು. ಆದ್ದರಿಂದ ಮೌನ ವಹಿಸುವುದು ಒಳಿತು.
ಸಿಂಹ: ಗುರು- ಹಿರಿಯ ರೊಂದಿಗೆ ಉತ್ತಮ ಸಂಬಂಧ ಕಾಪಾಡಿ ಕೊಳ್ಳು ವುದರಿಂದ ಮನಸ್ಸಿಗೆ ಶಾಂತಿ-ನೆಮ್ಮದಿ ಸಿಗಲಿದೆ.
ಕನ್ಯಾ: ಕೌಟುಂಬಿಕ ಅಗತ್ಯತೆ ಮತ್ತು ಜವಾಬ್ದಾರಿ ಪೂರೈಸಲು ಹಣ ಖರ್ಚು ಮಾಡಬೇಕಾಗುತ್ತದೆ.
ತುಲಾ: ವ್ಯವಹಾರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಬಯಸುವವರಿಗೆ ಇಂದು ಉತ್ತಮ ದಿನ.
ವೃಶ್ಚಿಕ: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.
ಧನುಸ್ಸು: ಸಹೋದ್ಯೋಗಿಗಳಿಂದ ಸಹಕಾರದ ಕೊರತೆಯಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಲಿದೆ.
ಮಕರ: ಸುತ್ತಮುತ್ತಲಿನ ಜನರೊಂದಿಗೆ ಹೆಚ್ಚು ಮಾತನಾಡದಿರುವುದು ಬಹಳ ಒಳ್ಳೆಯದು.
ಕುಂಭ: ಆರ್ಥಿಕವಾಗಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಮುಂಜಾಗ್ರತೆ ವಹಿಸಿ.
ಮೀನ: ಸಹೋದರರ ಮಾತಿನಿಂದಾಗಿ ಮಾನಸಿಕ ಒತ್ತಡಗಳು ಹೆಚ್ಚಾಗುವ ಸಾಧ್ಯತೆಗಳಿವೆ.

Articles You Might Like

Share This Article