ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-07-2022

Social Share

ನಿತ್ಯ ನೀತಿ : ಸೋಲಿನ ಕಥೆಗಳನ್ನು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ.
ಪಂಚಾಂಗ : ಮಂಗಳವಾರ, 26-07-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಆರಿದ್ರಾ / ಮಳೆ ನಕ್ಷತ್ರ: ಪುಷ್ಯ

ಸೂರ್ಯೋದಯ : ಬೆ.06.04
ಸೂರ್ಯಾಸ್ತ : 06.48
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30

# ರಾಶಿಭವಿಷ್ಯ :
ಮೇಷ:
ಕೆಲಸದಲ್ಲಿ ಯಶಸ್ಸು ಸಾಸಲು ನೆರೆಹೊರೆಯವರು ಸಹಾಯ ಮಾಡುವರು
ವೃಷಭ: ಅತಿಥಿಗಳ ಆಗಮನದಿಂದಾಗಿ ಖರ್ಚು-ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗಲಿವೆ.
ಮಿಥುನ:ಸಂಗಾತಿಯ ಪ್ರೀತಿಯಿಂದ ಎಲ್ಲಾ ಕಷ್ಟಗಳನ್ನು ಮರೆತುಬಿಡುತ್ತೀರಿ.
ಕಟಕ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು.
ಸಿಂಹ: ಶುಭ ಸಮಾರಂಭಕ್ಕೆ ಹೋಗಲು ಆರೋಗ್ಯ ಸಮಸ್ಯೆ ಎದುರಾಗಬಹುದು.
ಕನ್ಯಾ: ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳ ದಿರುವುದರಿಂದ ಸ್ನೇಹಿತರು ಕೋಪಗೊಳ್ಳಬಹುದು.
ತುಲಾ: ನೀವು ಇಷ್ಟಪಡುವ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಲು ಬಯಸುವಿರಿ.
ವೃಶ್ಚಿಕ: ಹಣದ ಕೊರತೆ ಇರುವುದಿಲ್ಲ. ಹಿಂದೆ ಮಾಡಿದ್ದ ಸಾಲ ತೀರಿಸುವಿರಿ.
ಧನುಸ್ಸು: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ಒಳ್ಳೆಯದಲ್ಲ.
ಮಕರ: ದುಷ್ಟ ಜನರ ಸಹವಾಸದಿಂದ ದೂರವಿರುವುದು ಒಳಿತು. ವೈಯಕ್ತಿಕ ವಿಚಾರಗಳ ಬಗ್ಗೆ ಗಮನ ಹರಿಸಿ.
ಕುಂಭ: ಧ್ಯಾನ ಮಾಡುವುದರಿಂದ ಮನಸ್ಸು ಹೆಚ್ಚು ಉಲ್ಲಾಸದಿಂದಿರುತ್ತದೆ. ಬಹಳ ಉತ್ತಮ ದಿನ.
ಮೀನ: ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡಿ. ಕುಟುಂಬ ಸದಸ್ಯರಿಗಾಗಿ ಹೆಚ್ಚು ಸಮಯ ಕಳೆಯುವಿರಿ.

Articles You Might Like

Share This Article