ನಿತ್ಯ ನೀತಿ : ಇಂದಿನ ಕಷ್ಟದ ದಿನಗಳೇ ನಾಳೆಯ ಖುಷಿಗೆ ಕಾರಣ. ನಮ್ಮನ್ನು ಸಮಯ ಎಷ್ಟು ಕಾಯಿಸುತ್ತದೆಯೋ ಅಷ್ಟು ಉತ್ತಮ ಫಲ ನಮಗೆ ಸಿಗುತ್ತದೆ.
ಪಂಚಾಂಗ : ಸೋಮವಾರ, 26-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಹಸ್ತ (ಪೂರ್ಣ) / ಮಳೆ ನಕ್ಷತ್ರ:ಉತ್ತರಫಲ್ಗುಣಿ
ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.13
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00
ಇಂದಿನ ಭವಿಷ್ಯ
ಮೇಷ: ಸಂಸ್ಥೆಯಲ್ಲಿ ಗೌರವ ಹಾಗೂ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಮತ್ತಷ್ಟು ಅನುಕೂಲ ಸಿಗಲಿದೆ.
ವೃಷಭ: ಗೃಹ ನಿರ್ಮಾಣ ಹಾಗೂ ನಿವೇಶನ ಖರೀದಿ ಯಂತಹ ಕೆಲಸ ಆರಂಭಿಸಲು ಉತ್ತಮ ದಿನ.
ಮಿಥುನ: ಸಹೋದ್ಯೋಗಿಗಳೊಂದಿಗೆ ಸಾಧ್ಯ ವಾದಷ್ಟು ಸಮಾಧಾನ ಹಾಗೂ ತಾಳ್ಮೆಯಿಂದ ವರ್ತಿಸಿ.
ಕಟಕ: ವೈದ್ಯರ ಸಲಹೆ-ಸೂಚನೆಗಳನ್ನು ಪಾಲಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.
ಸಿಂಹ: ಹಲವು ದಿನಗಳಿಂದ ಕೂಡಿಟ್ಟ ಹಣದಿಂದ ಬಂಗಾರ ಖರೀದಿಸುವಿರಿ.
ಕನ್ಯಾ: ರಾಜಕೀಯ ವ್ಯಕ್ತಿ ಗಳಿಗೆ ಇಂದಿನ ಸನ್ನಿವೇಶಗಳು ಅನುಕೂಲವಾಗಿರಲಿವೆ.
ತುಲಾ: ಹಿಂದೆ ಅವಮಾನಿ ಸಿದ ವ್ಯಕ್ತಿಗಳೇ ಇಂದು ನಿಮಗೆ ಗೌರವ ಕೊಡುವರು.
ವೃಶ್ಚಿಕ: ಪ್ರಾರಂಭಿಸಿದ ಕಾರ್ಯ ಪೂರ್ಣಗೊಳಿ ಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ.
ಧನುಸ್ಸು: ವ್ಯಾಪಾರ-ವ್ಯವಹಾರದಲ್ಲಿ ಅನಿರೀಕ್ಷಿತ ಬದಲಾವಣೆಗಳಾಗಬಹುದು. ಎಚ್ಚರಿಕೆಯಿಂದಿರಿ.
ಮಕರ: ನೂತನ ವಾಹನ ಕೊಳ್ಳುವುದನ್ನು ಮುಂದೂಡುವುದು ಒಳಿತು.
ಕುಂಭ: ನಷ್ಟ ಸಂಭವಿಸುತ್ತಿರುವ ಕಾರಣದಿಂದಾಗಿ ಜೀವನದ ಬಗ್ಗೆ ನಿರುತ್ಸಾಹ ತಾಳದಿರಿ.
ಮೀನ: ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಸಿಗಲಿದೆ. ಎಲ್ಲ ಕಾರ್ಯಗಳೂ ನೆರವೇರುವುವು.