ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-10-2022)

Social Share

ನಿತ್ಯ ನೀತಿ : ಪ್ರೀತಿಸುವುದು ಮತ್ತು ಇತರರಿಂದ ಪ್ರೀತಿಸಲ್ಪಡುವುದು ಜಗತ್ತಿನಲ್ಲಿ ನಿಜವಾದ ಸಂತೋಷ ಮಾತ್ರ.
ಪಂಚಾಂಗ : ಬುಧವಾರ, 26-10-2022
ಶುಭಕೃತ್ ನಾಮ ಸಂವತ್ಸರ । ದಕ್ಷಿಣಾಯನ । ಶರದ್ ಋತು । ಕಾರ್ತಿಕ ಮಾಸ । ಶುಕ್ಲ ಪಕ್ಷ । ತಿಥಿ: ಪ್ರತಿಪದ್ । ನಕ್ಷತ್ರ: ಸ್ವಾತಿ । ಮಳೆ ನಕ್ಷತ್ರ: ಸ್ವಾತಿ
ಸೂರ್ಯೋದಯ : ಬೆ.06.12
ಸೂರ್ಯಾಸ್ತ : 05.55
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

# ಇಂದಿನ ರಾಶಿಭವಿಷ್ಯ :
ಮೇಷ:
ವಿವೇಚನೆ ಉಪಯೋಗಿಸಿಕೊಂಡು ಕೆಲಸ ಮಾಡಿದಲ್ಲಿ ಹೆಚ್ಚಿನ ಅನುಕೂಲವಾಗಲಿದೆ.
ವೃಷಭ: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.
ಮಿಥುನ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಕಟಕ: ಅಂದುಕೊಂಡಿದ್ದ ಕೆಲಸಗಳು ಉತ್ತಮ ವಾಗಿ ನೆರವೇರುವುದರಿಂದ ನೆಮ್ಮದಿ ಇರುವುದು.
ಸಿಂಹ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಕನ್ಯಾ: ಸಂದಿಗ್ಧ ಪರಿಸ್ಥಿತಿ ಯನ್ನು ಧೈರ್ಯದಿಂದ ಎದುರಿಸಲು ಸಿದ್ಧರಾಗಿ.

ತುಲಾ: ವಿದೇಶ ವ್ಯವಹಾರಗಳಿಂದ ಹೆಚ್ಚಿನ ಲಾಭ ಗಳಿಸುವಿರಿ.
ವೃಶ್ಚಿಕ: ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗಲಿದೆ. ಕುಲದೇವರನ್ನು ಪ್ರಾರ್ಥಿಸಿ.
ಧನುಸ್ಸು: ದೈನಂದಿನ ಕೆಲಸಗಳು ನಿರಾತಂಕವಾಗಿ ನಡೆಯಲಿವೆ. ಕುಟುಂಬದ ಕಡೆ ಗಮನ ಹರಿಸಿ.

ಮಕರ: ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರ ಸಿಗಲಿದೆ. ಹಿರಿಯರೊಂದಿಗೆ ಚರ್ಚೆ ನಡೆಸುವಿರಿ.
ಕುಂಭ: ವೃತ್ತಿಯಲ್ಲಿ ನಿಮ್ಮ ಅನುಭವ ಹಾಗೂ ಪರಿಶ್ರಮಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ.
ಮೀನ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕವಾಗಿ ಮಾಡುವುದು ಸೂಕ್ತ.

Articles You Might Like

Share This Article