ನಿತ್ಯ ನೀತಿ : ಸತ್ಯವನ್ನು ಬಿಚ್ಚಿಟ್ಟಷ್ಟೂ ಮನಸ್ಸು ಹಗುರವಾಗುತ್ತಾ ಹೋಗುತ್ತದೆ. ಸತ್ಯವನ್ನು ಮುಚ್ಚಿಟ್ಟಷ್ಟೂ ಮನಸ್ಸು ಭಾರವಾಗುತ್ತಾ ಹೋಗುತ್ತದೆ.
# ಪಂಚಾಂಗ : ಗುರುವಾರ , 27-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ದಶಮಿ| ನಕ್ಷತ್ರ: ವಿಶಾಖಾ| ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.19
* ರಾಹುಕಾಲ : 1.30-3.00
* ಯಮಗಂಡ ಕಾಲ :6.00-7.30
* ಗುಳಿಕ ಕಾಲ : 9.00-10.30
# ರಾಶಿಭವಿಷ್ಯ
ಮೇಷ: ಕುಟುಂಬದಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸಮತೋಲನ ಕಾಪಾಡಿ ಕೊಳ್ಳಲು ಸಾಧ್ಯವಾಗುತ್ತದೆ.
ವೃಷಭ: ಹೃದಯ ಸಂಬಂಧಿ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
ಮಿಥುನ: ಹಿರಿಯರು ಮತ್ತು ಮೇಲಧಿಕಾರಿ ಗಳೊಂದಿಗೆ ಇದ್ದ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಿ.
ಕಟಕ: ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿಗಳು ಸಲಹೆ-ಸೂಚನೆ ನೀಡುವರು.
ಸಿಂಹ: ಮೇಲಧಿಕಾರಿಗಳು ಕಟ್ಟುನಿಟ್ಟಾಗಿ ನಡೆಸಿಕೊಳ್ಳುವುದರಿಂದ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸದಿರುವುದು ಒಳ್ಳೆಯದು.
ಕನ್ಯಾ: ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
ತುಲಾ: ಹಳೆಯ ಸಂಬಂಧಗಳು ಉಪಯೋಗಕ್ಕೆ ಬರುತ್ತವೆ ಮತ್ತು ಅವರಿಂದ ಸಹಾಯ ಸಿಗಲಿದೆ.
ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚ ಲಿದೆ. ಕುಟುಂಬದಲ್ಲಿ ಪೋಷಕರ ಬೆಂಬಲ ಸಿಗಲಿದೆ.
ಧನುಸ್ಸು: ನೆರೆಹೊರೆಯವರು ಮತ್ತು ಸಂಬಂಧಿಕರ ಮೇಲೆ ಕೋಪಗೊಳ್ಳುವುದನ್ನು ತಪ್ಪಿಸಿ.
ಮಕರ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿ ಅಥವಾ ಹಣ ದೊರೆಯುವ ಅವಕಾಶಗಳು ಹೆಚ್ಚಾಗಿವೆ.
ಕುಂಭ: ಕೆಲವು ಕಾರಣಗಳಿಂದ ತೊಂದರೆಗೊಳಗಾಗಬಹುದು. ಪೋಷಕರ ಆಶೀರ್ವಾದ ಪಡೆಯಿರಿ.
ಮೀನ: ವೃತ್ತಿಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದಿರಿ.
