ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-02-2022)

Social Share

ನಿತ್ಯನೀತಿ : ಕೋಪ ಎನ್ನುವುದು ಬೆಂಕಿ ಕಡ್ಡಿ ಇದ್ದಂತೆ. ಬೆಂಕಿಕಡ್ಡಿ ಹೇಗೆ ಬೇರೆ ವಸ್ತುಗಳನ್ನು ಸುಡುವ ಮೊದಲು ತನ್ನನ್ನು ಸುಟ್ಟುಕೊಳ್ಳುತ್ತದೆಯೋ ಅದೇ ರೀತಿ ಕೋಪವು ಬೇರೆಯವರಿಗಿಂತ ಮೊದಲು ನಮಗೆ ಹಾನಿ ಉಂಟುಮಾಡುತ್ತದೆ.
ಪಂಚಾಂಗ : ಭಾನುವಾರ, 27-02-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ/ ನಕ್ಷತ್ರ: ಪೂರ್ವಾಷಾಢ/ ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.37
* ಸೂರ್ಯಾಸ್ತ : 06.28
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30
# ರಾಶಿಭವಿಷ್ಯ :
ಮೇಷ: ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.
ವೃಷಭ: ಅನೇಕ ನಕಾರಾತ್ಮಕ ಆಲೋಚನೆಗಳು ಬರ ಬಹುದು. ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ಮಿಥುನ: ನಿಮ್ಮ ಮೇಲೆ ಬಾಕಿ ಇರುವ ಕೆಲಸಗಳ ಹೊರೆ ಹೆಚ್ಚಾಗಬಹುದು.
ಕಟಕ: ಶಾಂತ ಮನಸ್ಸಿನಿಂದ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿ.
ಸಿಂಹ: ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರುತ್ತವೆ. ವೈವಾಹಿಕ ಜೀವನದ ಬಗ್ಗೆ ಗಮನ ಕೊಡಿ
ಕನ್ಯಾ: ಕೆಲಸದ ಹೊರೆ ಹೆಚ್ಚಿ ದ್ದರೆ, ಭಯಪಡುವ ಬದಲು ಕಷ್ಟಪಟ್ಟು ಕೆಲಸ ಮಾಡಿ
ತುಲಾ: ಮನೆಯಲ್ಲಿ ಜಗಳಗಳು ಉಂಟಾಗ ಬಹುದು. ಹಣದ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ವಾಗ್ವಾದ ನಡೆಯಬಹುದು.
ವೃಶ್ಚಿಕ: ಸರ್ಕಾರಿ ಕೆಲಸ ಮಾಡುವವರು ಕೆಲವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು.
ಧನುಸ್ಸು: ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮನೆಯ ಕಿರಿಯ ಸದಸ್ಯರೊಂದಿಗಿನ ಸಂಬಂಧವು ಗಟ್ಟಿಯಾಗಿರುತ್ತದೆ.
ಮಕರ: ಖರ್ಚುಗಳು ಸ್ವಲ್ಪ ಹೆಚ್ಚಾಗಬಹುದು, ಆದರೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.
ಕುಂಭ: ಸಣ್ಣ ವ್ಯಾಪಾರಸ್ಥರಿಗೆ ಅನುಕೂಲಕರ ದಿನ. ಲಾಭ ಗಳಿಸಲು ಹಲವು ಅವಕಾಶಗಳು ಒದಗಲಿವೆ.
ಮೀನ: ಹಿರಿಯ ಸಹೋದರ ಸಹೋದರಿಯ ರೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ.

Articles You Might Like

Share This Article