ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(27-02-2023)

Social Share

ನಿತ್ಯ ನೀತಿ : ಎಲ್ಲ ಧರ್ಮಗಳೂ ಮನುಷ್ಯ ಧರ್ಮವೇ ಶ್ರೇಷ್ಠ ಎಂದಿವೆ. ಅರ್ಥೈಸಿಕೊಳ್ಳುವಲ್ಲಿ ಸೋತ ನಾವು ನಮ್ಮದೇ ಶ್ರೇಷ್ಠ ಎನ್ನುತ್ತೇವೆ.

ಪಂಚಾಂಗ : 27-02-2023, ಸೋಮವಾರ
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ರೋಹಿಣಿ / ಯೋಗ: ವೈಧೃತಿ / ಕರಣ: ವಿಷ್ಟಿ

* ಸೂರ್ಯೋದಯ : ಬೆ.06.37
* ಸೂರ್ಯಾಸ್ತ : 06.28
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00

# ರಾಶಿಭವಿಷ್ಯ

ಮೇಷ: ಹಿರಿಯರ ಅಭಿಪ್ರಾಯಗಳನ್ನು ಸ್ವೀಕರಿಸಿ. ವಿದ್ಯಾರ್ಥಿಗಳ ಮನಸ್ಸು ಚಂಚಲವಾಗಿರುತ್ತದೆ.
ವೃಷಭ: ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ದೂರ ಪ್ರಯಾಣ ಬೇಡ.
ಮಿಥುನ: ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುತ್ತೀರಿ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ.

ಕಟಕ: ನೆರೆಹೊರೆಯವರ ಭಾವನೆಗಳಿಗೆ ಸ್ಪಂದಿಸುವುದರಿಂದ ಅವರಿಗೆ ಸಂತಸವಾಗಲಿದೆ.
ಸಿಂಹ: ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಿದ್ದರೆ ಪರಿಹಾರ ಕಂಡುಕೊಳ್ಳುವಿರಿ.
ಕನ್ಯಾ: ಮಕ್ಕಳಿಂದ ಸಂತಸ ಸಿಗಲಿದೆ. ಗೌರವ- ಸನ್ಮಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ.

ತುಲಾ: ಮನೆಯ ಸದಸ್ಯರ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುವಿರಿ.
ವೃಶ್ಚಿಕ: ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಅವಿವಾಹಿತರಿಗೆ ವಿವಾಹ ಯೋಗ.
ಧನುಸ್ಸು: ಕಾರ್ಯಕ್ಷೇತ್ರದಲ್ಲಿ ಎಲ್ಲರೊಂದಿಗೆ ಚೆನ್ನಾಗಿ ನಡೆದುಕೊಳ್ಳುವಿರಿ ಮತ್ತು ಉತ್ತಮ ಹಣ ಗಳಿಸುವಿರಿ.

ಮಕರ: ಸ್ವಂತ ಉದ್ಯೋಗ ಮಾಡುವವರು ಪ್ರಗತಿ ಸಾಸುವರು. ಗೃಹಿಣಿಯರಿಗೆ ಸಂಭ್ರಮದ ದಿನ.
ಕುಂಭ: ಲೇವಾದೇವಿ ವ್ಯವ ಹಾರ ನಡೆಸುವುದು ಸರಿಯಲ್ಲ. ಮಕ್ಕಳಿಂದ ನೋವುಂಟಾಗಬಹುದು.
ಮೀನ: ಕೆಲಸ-ಕಾರ್ಯಗಳಲ್ಲಿ ಕಷ್ಟ-ನಷ್ಟಗಳು ಎದುರಾಗಬಹುದು. ಕರ್ತವ್ಯ ನಿರ್ಲಕ್ಷಿಸಬೇಡಿ.

#Horoscope, #KannadaHoroscope, #DailyHoroscope, #TodayHoroscope, #EesanjeHoroscope, #ಪಂಚಾಂಗ #ರಾಶಿಭವಿಷ್ಯ,

Articles You Might Like

Share This Article