ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-03-2022)

ನಿತ್ಯ ನೀತಿ : ಒಂದು ಹೂ ಮತ್ತೊಂದು ಹೂವಿನೊಂದಿಗೆ ಸ್ಪರ್ಧೆಗಿಳಿಯುವು ದಿಲ್ಲ. ಸುಂದರವಾಗಿ ಅರಳುವುದಷ್ಟೇ ಅವುಗಳ ಕೆಲಸ. ನಮ್ಮ ವ್ಯಕ್ತಿತ್ವವೂ ಹಾಗೇ ಇರಬೇಕು.

# ಪಂಚಾಂಗ : ಭಾನುವಾರ, 27-03-2022
ಪ್ಲವನಾಮ / ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಉತ್ತರಾಷಾಢ / ಮಳೆ ನಕ್ಷತ್ರ: ಉತ್ತರಾಭಾದ್ರ /

* ಸೂರ್ಯೋದಯ : ಬೆ.06.19
* ಸೂರ್ಯಾಸ್ತ : 06.31
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30

ಇಂದಿನ ರಾಶಿಭವಿಷ್ಯ :
ಮೇಷ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ
ವೃಷಭ: ಪೋಷಕರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಬನ್ನಿ.
ಮಿಥುನ: ಸಂಜೆ ಸಮಯದಲ್ಲಿ ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸಬೇಡಿ, ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಕಟಕ: ಹಣಕಾಸು ವ್ಯವಹಾರದಲ್ಲಿ ನಷ್ಟ ತಪ್ಪಿಸುವ ಉದ್ದೇಶದಿಂದ ಜಾಗರೂಕತೆಯಿಂದ ಇರಿ.
ಸಿಂಹ: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ವಾಹನ ಖರೀದಿಸುವಿರಿ.
ಕನ್ಯಾ: ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.

ತುಲಾ: ಮನೆಗೆ ಹೊಸ ಅತಿಥಿಯೊಬ್ಬರ ಸೇರ್ಪಡೆ ಯಾಗುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ವೃಶ್ಚಿಕ: ಶಾಂತ ಮನಸ್ಸಿನಿಂದ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿ.
ಧನುಸ್ಸು: ಮನಸ್ತಾಪ ತಪ್ಪಿಸಲು ಸಹೋದರ ರೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ.

ಮಕರ: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಕುಂಭ: ಖರ್ಚುಗಳು ಸ್ವಲ್ಪ ಹೆಚ್ಚಾಗಬಹುದು, ಆದರೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.
ಮೀನ: ಜೀವನ ಸಂಗಾತಿ ಯಿಂದ ನೀವು ಆರ್ಥಿಕ ಲಾಭ ಮತ್ತು ಗೌರವವನ್ನು ಪಡೆಯುತ್ತೀರಿ.

Sri Raghav

Admin