ನಿತ್ಯ ನೀತಿ : ಇಂದಿನ ಕಷ್ಟದ ದಿನಗಳೇ ನಾಳೆಯ ಖುಷಿಗೆ ಕಾರಣ. ನಮ್ಮನ್ನು ಸಮಯ ಎಷ್ಟು ಕಾಯಿಸುತ್ತದೆಯೋ ಅಷ್ಟು ಉತ್ತಮ ಫಲ ನಮಗೆ ಸಿಗುತ್ತದೆ.
ಪಂಚಾಂಗ : ಮಂಗಳವಾರ, 27-09-2022
ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ /ನಕ್ಷತ್ರ: ಹಸ್ತ / ಮಳೆ ನಕ್ಷತ್ರ: ಹಸ್ತ
ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.12
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30
ರಾಶಿಭವಿಷ್ಯ
ಮೇಷ: ಕಷ್ಟದಲ್ಲಿರುವ ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡಿ. ಸ್ನೇಹಿತರೊಂದಿಗೆ ಸಂತಸದಿಂದ ಹೆಚ್ಚು ಕೆಲಕಾಲ ಕಳೆಯುವಿರಿ.
ವೃಷಭ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬ ದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.
ಮಿಥುನ: ಬೇರೊಬ್ಬರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸುವುದು ಒಳಿತು.
ಕಟಕ: ಮೇಲಕಾರಿಗಳ ಮೆಚ್ಚುಗೆ ಪಡೆಯಲು ಶ್ರಮ ವಹಿಸಿ ಕೆಲಸ ಮಾಡಿ.
ಸಿಂಹ: ಶುಭ ಸಮಾರಂಭಕ್ಕೆ ಹೋಗಲು ಆರೋಗ್ಯ ಸಮಸ್ಯೆ ಎದುರಾಗಬಹುದು.
ಕನ್ಯಾ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿ ದರೆ ತೀರಿಸಲು ಕಷ್ಟವಾಗಲಿದೆ.
ತುಲಾ: ಸಮಾಧಾನದಿಂದ ಕೆಲಸ ಮಾಡುವುದನ್ನು ಕಲಿಯಿರಿ. ಒತ್ತಡಕ್ಕೆ ಒಳಗಾಗದಿರಿ.
ವೃಶ್ಚಿಕ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡಬೇಡಿ. ಎಲ್ಲ ಕಾರ್ಯಗಳನ್ನೂ ಎಚ್ಚರಿಕೆಯಿಂದ ನಿರ್ವಹಿಸಿ.
ಧನುಸ್ಸು: ಕುಟುಂಬದ ಹಿರಿಯರಿಗೆ ಪ್ರಾಮುಖ್ಯತೆ ನೀಡಿ. ಹೊಸ ವ್ಯವಹಾರ ಪ್ರಾರಂಭಿಸಿ.
ಮಕರ: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.
ಕುಂಭ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಬಹಳ ಆಹ್ಲಾದಕರವಾಗಿರುತ್ತದೆ.
ಮೀನ: ದುಷ್ಟ ಜನರ ಸಹವಾಸದಿಂದ ದೂರವಿರು ವುದು ಒಳಿತು. ಸುಖ ಭೋಜನ ಮಾಡುವಿರಿ.