ನಿತ್ಯ ನೀತಿ : ಸಹನೆ ನಿನ್ನದಾದರೆ ಸಕಲವೂ ನಿನ್ನದೇ. ವಿನಯವು ನಿನ್ನದಾದರೆ ವಿಜಯವೂ ನಿನ್ನದೇ.
# ಪಂಚಾಂಗ : ಶುಕ್ರವಾರ , 28-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ಏಕಾದಶಿ| ನಕ್ಷತ್ರ: ಅನುರಾಧಾ| ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.19
* ರಾಹುಕಾಲ : 1.30-12.00
* ಯಮಗಂಡ ಕಾಲ : 3.00-4.30
* ಗುಳಿಕ ಕಾಲ : 7.30-9.00
# ರಾಶಿಭವಿಷ್ಯ
ಮೇಷ: ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ತೊಂದರೆ ಎದುರಾದರೂ ಸಹಪಾಠಿಗಳ ಬೆಂಬಲ ಸಿಗಲಿದೆ.
ವೃಷಭ: ಕೆಲಸದ ಸ್ಥಳದಲ್ಲಿ ಪ್ರತಿಯೊಂದನ್ನೂ ಸಮಾಧಾನಚಿತ್ತದಿಂದ ನಿಭಾಯಿಸಲು ಪ್ರಯತ್ನಿಸಿ.
ಮಿಥುನ: ಸಂಬಂಧಿಕರ ನಡುವಿನ ಯಾವುದೇ ವಿವಾದ ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಹೋಗದಿರಿ.
ಕಟಕ: ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರೆ ಅದರಲ್ಲಿ ಯಶಸ್ಸು ಸಿಗಲಿದೆ.
ಸಿಂಹ: ಕಠಿಣ ಪರಿಶ್ರಮದ ನಂತರ ಉದ್ಯೋಗಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ.
ಕನ್ಯಾ: ಬೇರೆಯವರೊಂದಿಗೆ ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಿ ಮತ್ತು ನಡವಳಿಕೆ ಉತ್ತಮವಾಗಿರಲಿ.
ತುಲಾ: ಕೆಲಸ-ಕಾರ್ಯಗಳಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ದೊರೆಯಲಿದೆ.
ವೃಶ್ಚಿಕ: ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.
ಧನುಸ್ಸು: ತಂದೆಯ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುವುದು.
ಮಕರ: ಸಂಗಾತಿಯೊಂದಿಗೆ ವಿವಾದಾತ್ಮಕ ವಿಷಯಗಳನ್ನು ಚರ್ಚಿಸುವುದನ್ನು ತಪ್ಪಿಸಿ.
ಕುಂಭ: ಕೆಲವು ಸ್ಥಗಿತಗೊಂಡ ಕೆಲಸಗಳು ಇಂದು ಪೂರ್ಣಗೊಂಡು ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಮೀನ: ಹಳೆಯ ಪರಿಚಯಸ್ಥರನ್ನು ಭೇಟಿ ಮಾಡುವಿರಿ. ಹಿರಿಯರ ಆಶೀರ್ವಾದ ಪಡೆಯಿರಿ.
