ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-03-2022)

ನಿತ್ಯ ನೀತಿ : ನಾವು ಹೇಳುವ ಸುಳ್ಳು ನಮ್ಮ ಮೇಲಿರುವ ನಂಬಿಕೆ ಹಾಗೂ ಗೌರವ ವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

# ಪಂಚಾಂಗ : ಸೋಮವಾರ, 28-03-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ
ತಿಥಿ: ಏಕಾದಶಿ / ನಕ್ಷತ್ರ: ಶ್ರವಣ / ಮಳೆ ನಕ್ಷತ್ರ: ಉತ್ತರಾಭಾದ್ರ

* ಸೂರ್ಯೋದಯ : ಬೆ.06.19
* ಸೂರ್ಯಾಸ್ತ : 06.31
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00

# ಇಂದಿನ ರಾಶಿ ಭವಿಷ್ಯ
ಮೇಷ: ರಿಯಲ್ ಎಸ್ಟೇಟ್‍ಗೆ ಸಂಬಂಸಿದ ಕ್ಷೇತ್ರಗಳಲ್ಲಿ ಹೆಚ್ಚು ಲಾಭ ಗಳಿಸುವಿರಿ.
ವೃಷಭ: ಹಲ್ಲುಗಳಿಗೆ ಸಂಬಂಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಿಥುನ: ನೀವು ಮಾಡುವ ಪ್ರತಿಯೊಂದು ಕೆಲಸ ದಲ್ಲೂ ವ್ಯಕ್ತಿಯೊಬ್ಬರು ಅಡಚಣೆ ಮಾಡುವರು.

ಕಟಕ: ಸುತ್ತಮುತ್ತಲಿನ ಜನರೊಂದಿಗೆ ಜಗಳ ವಾಡದಿರುವುದು ಸೂಕ್ತ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಸಿಂಹ: ಹಿಂದೆ ಹೂಡಿಕೆ ಮಾಡಿದ ಹಣದಿಂದ ಉತ್ತಮ ಲಾಭ ಬರುವ ಸಾಧ್ಯತೆಗಳಿವೆ.
ಕನ್ಯಾ: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು.

ತುಲಾ: ಅತಿಯಾದ ಆತ್ಮವಿಶ್ವಾಸ ಬೇಡ. ನೀವು ಮಾಡುವ ಕೆಲಸಕ್ಕೆ ಹಿರಿಯರು ಅಥವಾ ಒಡಹುಟ್ಟಿದವರ ಸಹಾಯ ಬೇಕಾಗುತ್ತದೆ.
ವೃಶ್ಚಿಕ: ಸ್ನೇಹಿತರ ಸಹಾಯ ದಿಂದ ವೃತ್ತಿ ಕ್ಷೇತ್ರದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು.
ಧನುಸ್ಸು: ಎಲ್ಲಾ ಕೆಲಸಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತ ವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.

ಮಕರ: ಯಾರೊಂದಿಗಾದರೂ ವೈರತ್ವ ಹೊಂದಿದ್ದರೆ ಅವರ ಬಗೆಗಿನ ಎಲ್ಲಾ ತಪ್ಪುಗ್ರಹಿಕೆಗಳು ದೂರವಾಗಲಿವೆ.
ಕುಂಭ: ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮಗಳನ್ನು ಅನುಸರಿಸಿ.
ಮೀನ: ಯೋಗ, ಧ್ಯಾನ ಮಾಡುವುದರಿಂದ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ.

Sri Raghav

Admin