ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-05-2022)

ನಿತ್ಯ ನೀತಿ : ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ.

# ಪಂಚಾಂಗ : ಶನಿವಾರ , 28.-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಕೃಷ್ಣ ಪಕ್ಷ / ತಿಥಿ: ತ್ರಯೋದಶಿ/ ನಕ್ಷತ್ರ: ಭರಣಿ/ಮಳೆ ನಕ್ಷತ್ರ: ರೋಹಿಣಿ

* ಸೂರ್ಯೋದಯ : ಬೆ.5.52
* ಸೂರ್ಯಾಸ್ತ : 06.42
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30

# ಇಂದಿನ ರಾಶಿ ಭವಿಷ್ಯ : 
ಮೇಷ: ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಯಿದೆ. ನೀವು ನೀಡಿದ ಸಾಲ ಹಿಂದಿರುಗಲಿದೆ.
ವೃಷಭ: ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತೆಗೆ ಕಾರಣವಾಗಬಹುದು. ವೈಯಕ್ತಿಕ ಸಂಬಂಧಗಳು ಸೂಕ್ಷ್ಮ ಮತ್ತು ದುರ್ಬಲವಾಗಿರುತ್ತವೆ.
ಮಿಥುನ: ಅನಿರೀಕ್ಷಿತ ಮೂಲಗಳಿಂದ ಆಹ್ವಾನ ಸಿಗಲಿದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ನಿಮಗೆ ಕಿರಿಕಿರಿ ಉಂಟು ಮಾಡಬಹುದು.

ಕಟಕ: ಸ್ನೇಹಿತರು ಮತ್ತು ಪರಿಚಯಸ್ಥರಿಂದ ಉತ್ತಮ ಬೆಂಬಲ ಪಡೆಯುತ್ತೀರಿ.
ಸಿಂಹ: ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.
ಕನ್ಯಾ: ಕೆಲವು ಹಳೆಯ ಸ್ಥಗಿತಗೊಂಡ ಯೋಜನೆಗಳ ಕೆಲಸ ಮತ್ತೆ ಪ್ರಾರಂಭವಾಗಬಹುದು.

ತುಲಾ: ಧಾರ್ಮಿಕ ಕಾರ್ಯಗಳನ್ನು ಮಾಡಲು ಇಂದು ಉತ್ತಮ ದಿನವಾಗಿದೆ.
ವೃಶ್ಚಿಕ: ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಸಾಧ್ಯವಿರುವ ಎಲ್ಲ ಬೆಂಬಲ ನಿಮಗೆ ಸಿಗಲಿದೆ.
ಧನುಸ್ಸು: ಚಾತುರ್ಯತೆ ಮತ್ತು ಬುದ್ಧಿವಂತಿಕೆ ಯಿಂದ ಕೆಲಸದಲ್ಲಿ ಯಶಸ್ವಿ ಸಾಧಿಸುವಿರಿ.

ಮಕರ: ಪ್ರತಿ ಕೆಲಸವನ್ನು ಸುಲಭಗೊಳಿಸಲು ನೀವು ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸುವಿರಿ.
ಕುಂಭ: ಹಿತಶತ್ರುಗಳು ಹೆಚ್ಚಾಗಬಹುದು. ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ.
ಮೀನ: ಹಣಕಾಸಿನ ವ್ಯವಹಾರ ಮಾಡುವವರಿಗೆ ಸಾಮಾನ್ಯ ಮುನ್ನಡೆ ಇರುತ್ತದೆ.