ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-01-2022)

Social Share

ನಿತ್ಯ ನೀತಿ : ದುರ್ಬಲರು ಎಂದೂ ಕ್ಷಮಿಸುವುದಿಲ್ಲ. ಕ್ಷಮೆ ಎನ್ನುವುದು ಯಾವತ್ತೂ ಬಲಶಾಲಿಗಳ ಕೊಡುಗೆ.
# ಪಂಚಾಂಗ : ಶನಿವಾರ, 29-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ದ್ವಾದಶಿ| ನಕ್ಷತ್ರ: ಮೂಲಾ| ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.19
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30
# ರಾಶಿಭವಿಷ್ಯ 
ಮೇಷ: ನಿಮ್ಮ ಕೆಲಸವು ತಾತ್ಕಾಲಿಕವಾಗಿದ್ದರೆ, ಈ ಸಮಯದಲ್ಲಿ ಕೆಲಸದ ಬಗ್ಗೆ ತುಂಬಾ ಚಿಂತೆ ಮಾಡುವಿರಿ.
ವೃಷಭ: ಕೋಪವನ್ನು ನಿಯಂತ್ರಿಸಬೇಕಾಗುತ್ತದೆ. ಮನಸ್ಥಿತಿ ಸರಿಯಿಲ್ಲದಿರುವುದರಿಂದ ಕೋಪ ತಕ್ಷಣವೇ ಬರುತ್ತದೆ.
ಮಿಥುನ: ಕೌಟುಂಬಿಕ ಜೀವನ ದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ.
ಕಟಕ: ವ್ಯಾಪಾರಿಗಳು ಜಾಗರೂಕರಾಗಬೇಕು. ಆರ್ಥಿಕವಾಗಿ ಒಪ್ಪಂದ ಮಾಡಿಕೊಳ್ಳಲು ತಾಳ್ಮೆಯಿಂದ ವರ್ತಿಸಿ.
ಸಿಂಹ: ಬಹಳ ದಿನಗಳ ನಂತರ ಹಳೆಯ ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ.
ಕನ್ಯಾ: ಮನೆಯಲ್ಲಿ ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ತುಲಾ: ಆತುರದ ನಿರ್ಧಾರ ಕೈಗೊಳ್ಳುವುದರಿಂದ ದೊಡ್ಡ ನಷ್ಟಕ್ಕೆ ಅನುಭವಿಸಬೇಕಾಗುತ್ತದೆ.
ವೃಶ್ಚಿಕ: ಕೆಲಸದ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಧನುಸ್ಸು: ವ್ಯಾಪಾರಿಗಳಿಗೆ ಲಾಭ ಗಳಿಸಲು ಉತ್ತಮ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಿ.
ಮಕರ: ಪತ್ನಿ ಕಡೆಯಿಂದ ಶುಭ ಸುದ್ದಿ ಕೇಳುವಿರಿ. ಹಣಕಾಸು ಪರಿಸ್ಥಿತಿ ಉತ್ತಮವಾಗಿರುತ್ತದೆ.
ಕುಂಭ: ವೈವಾಹಿಕ ಜೀವನದಲ್ಲಿ ಇಂದು ಒಂದು ಮಹತ್ವದ ದಿನವಾಗಬಹುದು.
ಮೀನ: ಕಚೇರಿ ಕೆಲಸದಲ್ಲಿ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ.

Articles You Might Like

Share This Article