ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-05-2022)

Spread the love

ನಿತ್ಯ ನೀತಿ : ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ಮನುಷ್ಯನಿಗೆ ಮಾತ್ರ.

# ಪಂಚಾಂಗ : ಭಾನುವಾರ , 29.-05-2022
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ /
ಕೃಷ್ಣ ಪಕ್ಷ / ತಿಥಿ: ಚತುರ್ದಶಿ/ ನಕ್ಷತ್ರ: ಕೃತ್ತಿಕಾ/ಮಳೆ ನಕ್ಷತ್ರ: ರೋಹಿಣಿ

* ಸೂರ್ಯೋದಯ : ಬೆ.5.52
* ಸೂರ್ಯಾಸ್ತ : 06.42
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30

# ಇಂದಿನ ರಾಶಿ ಭವಿಷ್ಯ : 
ಮೇಷ: ಉದ್ಯೋಗದಲ್ಲಿ ಉತ್ತಮ ಹಣದ ಲಾಭವಿದೆ ಮತ್ತು ಬಡ್ತಿಯ ಸೂಚನೆಗಳಿವೆ.
ವೃಷಭ: ಮಾನಸಿಕ ಒತ್ತಡ ಹೆಚ್ಚಾಗುವುದು. ಕೆಲಸ-ಕಾರ್ಯಗಳನ್ನು ಆದಷ್ಟು ಬೇಗ ಮುಗಿಸಿ.
ಮಿಥುನ: ಕಠಿಣ ಪರಿಶ್ರಮ ದಿಂದ ಕಷ್ಟಕರ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸಲಾಗುತ್ತದೆ.

ಕಟಕ: ಉದ್ಯೋಗಕ್ಕಾಗಿ ನಡೆಸಿದ ತೀವ್ರ ಪ್ರಯತ್ನ ಇಂದು ಶುಭ ಫಲ ನೀಡಲಿದೆ.
ಸಿಂಹ: ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಪೋಷಕರ ಆಶೀರ್ವಾದ ಪಡೆಯಿರಿ.
ಕನ್ಯಾ: ಪಾಲುದಾರಿಕೆ ವಿಚಾರ ದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ.

ತುಲಾ: ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನ ಹರಿಸುವುದು ಒಳಿತು.
ವೃಶ್ಚಿಕ: ವ್ಯಾಪಾರಸ್ಥರಿಗೆ ಶುಭಕರ ದಿನವಾಗಿದೆ. ಯಾವುದೇ ರೀತಿಯ ವಿವಾದಗಳಿಂದ ದೂರವಿರಿ.
ಧನುಸ್ಸು: ದಿನನಿತ್ಯ ನಡೆಯುವ ಸಣ್ಣಪುಟ್ಟ ಕಲಹ ಗಳಿಂದಾಗಿ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುವಿರಿ.

ಮಕರ:ಲೆಕ್ಕಪರಿಶೋಧಕರಿಗೆ ಅನಿರೀಕ್ಷಿತ ಸಮಸ್ಯೆಗಳು ತಲೆದೋರಬಹುದು.
ಕುಂಭ: ಕಾರ್ಯಕ್ಷೇತ್ರದಲ್ಲಿ ಶಾಂತರೀತಿಯಲ್ಲಿ ವ್ಯವಹರಿಸಿದರೆ ಒಳಿತು.
ಮೀನ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲವಾಗಲಿದೆ. ಅಧಿಕ ಲಾಭ ಸಿಗಲಿದೆ.

Facebook Comments