ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(29-11-2022)

Social Share

ನಿತ್ಯ ನೀತಿ : ಯಾರ ಮನೆಯಲ್ಲಿ ತಂದೆ-ತಾಯಿ ನಗುತ್ತಾ ಇರುತ್ತಾರೋ ಆ ಮನೆಯಲ್ಲಿ ಭಗವಂತ ನೆಲೆಸಿರುತ್ತಾನೆ.
ಪಂಚಾಂಗ : ಮಂಗಳವಾರ , 29-11-2022
ಶುಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಶ್ರವಣ / ಮಳೆ ನಕ್ಷತ್ರ: ಅನುರಾಧ
ಸೂರ್ಯೋದಯ – ಬೆ.06.25
ಸೂರ್ಯಾಸ್ತ – 05.51
ರಾಹುಕಾಲ- 3.00-4.30
ಯಮಗಂಡ ಕಾಲ- 9.00-10.30
ಗುಳಿಕ ಕಾಲ- 12.00-1.30

ಇಂದಿನ ರಾಶಿಭವಿಷ್ಯ
ಮೇಷ:
ನೀವು ನಿರೀಕ್ಷಿಸಿದ ಉದ್ಯಮದ ಹೊರತಾಗಿ ಬೇರೆ ಕಡೆ ಅವಕಾಶ ದೊರೆಯಲಿದೆ.
ವೃಷಭ: ವ್ಯವಹಾರಕ್ಕೆ ಸಂಬಂಧಿಸಿದಂತೆ ಹಿರಿಯರು ಮತ್ತು ಮಡದಿಯಲ್ಲಿದ್ದ ನಕಾರಾತ್ಮಕ ಪ್ರತಿಕ್ರಿಯೆ ಬದಲಾಗಲಿದೆ.
ಮಿಥುನ: ವಂಶಪಾರಂಪರ್ಯವಾಗಿ ಬಂದ ವ್ಯಾಪಾರ- ವ್ಯವಹಾರಗಳು ಮತ್ತಷ್ಟು ಪ್ರಗತಿ ಕಾಣಲಿವೆ.

ಕಟಕ: ಒಡಹುಟ್ಟಿದವರ ಸಹಾಯ-ಸಹಕಾರದಿಂದ ಮಾನಸಿಕ ನೆಮ್ಮದಿ ಹಾಗೂ ಸಂಸಾರದಲ್ಲಿ ಸಮ ತೋಲನ ಪಡೆಯುವಿರಿ.
ಸಿಂಹ: ವಿನಾಕಾರಣ ಅಲೆದಾಟದಿಂದ ಬೇಸರ ಪಡುವ ಅವಶ್ಯಕತೆ ಇಲ್ಲ.
ಕನ್ಯಾ: ಇಂದಿನ ನಿಮ್ಮ ಶ್ರಮ ಮುಂದಿನ ದಿನಕ್ಕೆ ಅಡಿಪಾಯವಾಗಲಿದೆ.

ತುಲಾ: ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ವ್ಯಯವಾಗಲಿದೆ.
ವೃಶ್ಚಿಕ: ಸಂತೋಷಕೂಟ ಗಳಲ್ಲಿ ಭಾಗವಹಿಸುವಾಗ ಗೌರವ ಕಾಪಾಡಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳುವ ಬಗ್ಗೆ ಗಮನವಿರಲಿ.
ಧನುಸ್ಸು: ಯಾವುದೇ ವಿಷಯದಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ.

ಮಕರ: ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನ.
ಕುಂಭ: ಕಲಾವಿದರಿಗೆ ಒಳ್ಳೆಯ ಅವಕಾಶಗಳು ದೊರೆ ಯುತ್ತವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ.
ಮೀನ: ತಂದೆ-ತಾಯಿಯ ಆರೋಗ್ಯ ಸುಧಾರಿಸು ವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.

Articles You Might Like

Share This Article