ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-01-2022)

Social Share

ನಿತ್ಯ ನೀತಿ : ಗೋಡೆಯ ಮೇಲೆ ಇರುವೆಗಳು ಎಷ್ಟೇ ಅವಸರವಿದ್ದರೂ ಪರಸ್ಪರ ಒಂದನ್ನೊಂದು ಭೇಟಿಯಾಗಿ ಮುಂದೆ ಹೋಗುವಂತೆ ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರಾದಾಗ ನಿರ್ಮಲ ದೃಷ್ಟಿ , ಸಣ್ಣ ನಗೆ ಸಾಕು..! ನಮ್ಮ ಪ್ರೀತಿ, ಸಂತೋಷ ಇಮ್ಮಡಿಯಾಗುತ್ತದೆ.
# ಪಂಚಾಂಗ : ಸೋಮವಾರ , 31-01-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಹೇಮಂತ ಋತು | ಪುಷ್ಯ ಮಾಸ | ಕೃಷ್ಣ ಪಕ್ಷ | ತಿಥಿ: ಚತುರ್ದಶಿ| ನಕ್ಷತ್ರ: ಉತ್ತರಾಷಾಢ| ಮಳೆ ನಕ್ಷತ್ರ: ಶ್ರವಣ
* ಸೂರ್ಯೋದಯ : ಬೆ.06.46
* ಸೂರ್ಯಾಸ್ತ : 06.20
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00
# ರಾಶಿಭವಿಷ್ಯ 
ಮೇಷ: ಸಂಗಾತಿಯಿಂದ ಅನೇಕ ಸಮಸ್ಯೆಗಳಿಗೆ ಪರಿಹಾರಗಳು ದೊರೆಯಲಿವೆ. ಉಳಿತಾಯದಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ವೃಷಭ:ಸಕಾರಾತ್ಮಕ ಚಿಂತನೆ ಮತ್ತು ಕಠಿಣ ಪರಿಶ್ರಮದಿಂದ ಮುಂದೆ ಬರಲು ಸಾಧ್ಯವಾಗುತ್ತದೆ.
ಮಿಥುನ: ಕುಟುಂಬ ಸದಸ್ಯರು ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ.
ಕಟಕ: ಯಾವುದೇ ಪ್ರಮುಖ ನಿರ್ಧಾರ ತೆಗೆದು ಕೊಳ್ಳಬೇಕಾದಲ್ಲಿ ಹಿರಿಯರ ಸಲಹೆ ಪಡೆಯಿರಿ.
ಸಿಂಹ: ಸುಳ್ಳು ಆಶ್ವಾಸನೆಗಳಿಗೆ ಕಿವಿಕೊಡುವುದರಿಂದ ಮಾನಸಿಕ ನೆಮ್ಮದಿ ಹಾಳಾಗಲಿದೆ.
ಕನ್ಯಾ: ಹಳೆ ದ್ವೇಷ ಮನಸ್ಸಿನಲ್ಲಿಟ್ಟುಕೊಂಡು ಅನಗತ್ಯ ವಿಷಯಗಳಿಗೆ ಗಲಾಟೆ ಮಾಡಿಕೊಳ್ಳದಿರಿ.
ತುಲಾ: ಸಹೋದ್ಯೋಗಿಯ ಕಾರಣದಿಂದಾಗಿ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ.
ವೃಶ್ಚಿಕ: ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿ ದ್ದರೆ, ಅವರೊಂದಿಗೆ ಹೊಂದಾಣಿಕೆಯಿಂದಿರಿ.
ಧನುಸ್ಸು: ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ಯಶಸ್ಸು ಪಡೆಯುವಿರಿ. ಯಾವುದಕ್ಕೂ ಚಿಂತಿಸದಿರಿ.
ಮಕರ: ಕುಟುಂಬ ಸದಸ್ಯರ ವಿಭಿನ್ನ ಅಭಿಪ್ರಾಯ ಗಳು ಅಸಮಾಧಾನ ಉಂಟುಮಾಡುತ್ತವೆ.
ಕುಂಭ: ಹಣಕಾಸು ಪರಿಸ್ಥಿತಿ ಉತ್ತಮವಾಗಿರುತ್ತದೆ. ದೂರ ಪ್ರಯಾಣ ಮಾಡುವಿರಿ.
ಮೀನ: ನೀವು ಮಾಡುವ ಕೆಲಸಗಳಿಗೆ ಕುಟುಂಬ ದವರು, ಸಹೋದ್ಯೋಗಿಗಳ ಬೆಂಬಲ ಸಿಗಲಿದೆ.

Articles You Might Like

Share This Article