ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-12-2022)

Social Share

ನಿತ್ಯನೀತಿ : ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.

ಪಂಚಾಂಗ : ಶನಿವಾರ, 31-12-2022
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ರೇವತಿ / ಮಳೆ ನಕ್ಷತ್ರ:ಪೂರ್ವಾಷಾಢ

ಸೂರ್ಯೋದಯ : ಬೆ.06.41
ಸೂರ್ಯಾಸ್ತ : 06.04
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30

ಇಂದಿನ ರಾಶಿಭವಿಷ್ಯ :
ಮೇಷ:
ವ್ಯಾಪಾರದಲ್ಲಿ ಎಚ್ಚರಿಕೆಯಿಂದಿರಿ. ವೃತ್ತಿ ಜೀವನದಲ್ಲಿ ಏರುಪೇರಾಗಿ ಗೊಂದಲ ಮೂಡಬಹುದು.
ವೃಷಭ: ಅಪವಾದದ ಭೀತಿಗೆ ಒಳಗಾಗದಿರಿ. ಅವಿವಾಹಿತರು ಶುಭ ಸುದ್ದಿ ಕೇಳುವರು.
ಮಿಥುನ: ಸದಾಕಾಲ ದುಡಿಯುವ ನಿಮಗೆ ಉತ್ತಮ ಫಲಗಳು ಸಿಗಲಿವೆ. ಗೆಳೆಯರೊಂದಿಗೆ ಸಮಯ ಕಳೆಯುವಿರಿ.

ಕಟಕ: ವಿನಾಕಾರಣ ಅಕ ಭಯದಿಂದ ಆತಂಕಕ್ಕೆ ಒಳಗಾಗುವಿರಿ. ಹಣಕಾಸು ವಿಷಯದಲ್ಲಿ ಹುಷಾರಾಗಿರಿ.
ಸಿಂಹ: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ಕನ್ಯಾ: ಜಾಣ್ಮೆಯಿಂದ ಅವಕಾಶ ಬಳಸಿಕೊಂಡಲ್ಲಿ ಅಧಿಕಾರ ಪಡೆದುಕೊಳ್ಳು ವುದು ಕಷ್ಟದ ಕೆಲಸವಲ್ಲ.

ತುಲಾ: ಮನೆಗೆ ಹೊಸ ಪೀಠೋಪಕರಣಗಳ ಖರೀದಿಗೆ ಧನ ವ್ಯಯವಾಗಲಿದೆ.
ವೃಶ್ಚಿಕ: ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಚಿಂತೆಗೆ ಅವಕಾಶವಿಲ್ಲ.
ಧನುಸ್ಸು: ಉದ್ಯೋಗ ನಿಮಿತ್ತ ಪ್ರಯಾಣ ಮಾಡು ವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.

ಮಕರ: ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಒಳಿತು.
ಕುಂಭ: ಯಾವುದೇ ಅನಿವಾರ್ಯತೆ ಇಲ್ಲದೆ ಕೇವಲ ಹಿರಿಮೆಗಾಗಿ ವಿಲಾಸಿ ವಸ್ತುಗಳನ್ನು ಖರೀದಿಸುವಿರಿ.
ಮೀನ: ಬಟ್ಟೆ ವ್ಯಾಪಾರಿಗಳಿಗೆ ವ್ಯವಹಾರ ಉತ್ತಮವಾಗಿದ್ದು, ಹೆಚ್ಚಿನ ಆದಾಯ ಸಿಗಲಿದೆ.

#Horoscope, #KannadaHoroscope, #DailyHoroscope, #TodayHoroscope, #EesanjeHoroscope, #ಪಂಚಾಂಗ #ರಾಶಿಭವಿಷ್ಯ,

Articles You Might Like

Share This Article