ಇಂದಿನ ಪಂಚಾಗ ಮತ್ತು ರಾಶಿಫಲ (09-11-2019-ಶನಿವಾರ)

ನಿತ್ಯ ನೀತಿ : ವಿಷವು ರಕ್ತವನ್ನು ಸೇರಿ ಹೇಗೆ ಶರೀರದಲ್ಲಿ ಹಡಗುತ್ತದೆಯೋ ಅದೇ ರೀತಿ ಸ್ವಲ್ಪ ಅವಕಾಶವನ್ನು ಹೊಂದಿ ದರೂ ದೋಷವು ಮನಸ್ಸನ್ನು ಕೆಡಿಸುತ್ತದೆ.
-ಬೋಧಿಚರ್ಯಾವತಾರ

# ಪಂಚಾಂಗ : ಶನಿವಾರ 09.11.2019
ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.05.58
ಚಂದ್ರ ಉದಯ ಮ.03.57 / ಚಂದ್ರ ಅಸ್ತ ರಾ.04.18
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು, / ಕಾರ್ತಿಕ ಮಾಸ, ಶುಕ್ಲ ಪಕ್ಷ / ತಿಥಿ: ದ್ವಾದಶಿ (ಮ.02.40)
ನಕ್ಷತ್ರ: ಉತ್ತರಾಭಾದ್ರ (ಮ.02.56) / ಯೋಗ: ಹರ್ಷಣ (ಬೆ.10.15) / ಕರಣ: ಬಾಲವ-ಕೌಲವ (ಮ.02.40-ರಾ.03.39)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 23

ಮೇಷ: ಕೀರ್ತಿ, ಗೌರವಗಳು ಲಭಿಸಲಿವೆ
ವೃಷಭ: ವಿದ್ಯಾರ್ಥಿಗಳಿಗೆ ಮಾನಸಿಕ ಚಿಂತೆ ಕಾಡಲಿದೆ
ಮಿಥುನ: ಸಜ್ಜನರ ಸಹವಾಸ ಮಾಡುವಿರಿ
ಕಟಕ: ಅನಾರೋಗ್ಯ ಪೀಡಿತರಾಗಬಹುದು
ಸಿಂಹ: ನೀವು ಮಾಡಿಕೊಂಡಿ ರುವ ಒಪ್ಪಂದಗಳನ್ನು ಮುಂದೂಡುವುದು ಒಳಿತು
ಕನ್ಯಾ: ಕೆಲಸ ನಿಮಿತ್ತ ದೂರದ ಊರಿಗೆ ಮಗನ ಪ್ರಯಾಣ
ತುಲಾ: ನೀವು ಯೋಜಿಸಿದ ಯೋಜನೆಗಳನ್ನು ನಿಮ್ಮವರೊಂದಿಗೆ ವಿವರಿಸಿ
ವೃಶ್ಚಿಕ: ಸಂಗಾತಿಯ ಸಲಹೆಗಳಿಗೆ ಆದ್ಯತೆ ನೀಡಿ
ಧನುಸ್ಸು: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಗಾ ವಹಿಸಿ
ಮಕರ: ನಿಮ್ಮ ಯೋಜನೆಗಳು ಇತರರಿಗೆ ಅನುಕೂಲವಾಗುವುದರ ಜತೆಗೆ ನೆಮ್ಮದಿ ಸಿಗಲಿದೆ
ಕುಂಭ: ನಿಮ್ಮ ನಡೆ ಇತರರಿಗೆ ಮಾದರಿಯಾಗಲಿದೆ
ಮೀನ: ಉತ್ತಮ ಕಾರ್ಯವೊಂದನ್ನು ಹಮ್ಮಿಕೊಂಡಿದ್ದಲ್ಲಿ ಹಿರಿಯರ ಆಶೀರ್ವಾದದಿಂದ ಯಶಸ್ವಿಯಾಗುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)