ಇಂದಿನ ಪಂಚಾಗ ಮತ್ತು ರಾಶಿಫಲ (12-11-2019-ಮಂಗಳವಾರ)

ನಿತ್ಯ ನೀತಿ : ಇತರರ ಸ್ವತ್ತನ್ನು ಅಪಹರಿಸುವ ಇಚ್ಛೆಯುಳ್ಳ ಚಾಡಿಕೋರನು ತಾನಾಗಿಯೇ ಹಾಳಾಗುತ್ತಾನೆ. ದೊಡ್ಡದೀಪವನ್ನು ನಂಗಲು ಹೊರಟ ಪತಂಗದ ಹುಳು ಸುಟ್ಟು ಹೋಗದೆ ಇದ್ದೀತೆ?  –ವಿಶ್ವಗುಣಾದರ್ಶ

# ಪಂಚಾಂಗ : ಮಂಗಳವಾರ, 12.11.2019
ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.05.56
ಚಂದ್ರ ಉದಯ ಸಂ.05.04 / ಚಂದ್ರ ಅಸ್ತ ಬೆ.06.45
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಪೂರ್ಣಿಮಾ (ರಾ.07.04)
ನಕ್ಷತ್ರ: ಭರಣಿ (ರಾ.08.51) / ಯೋಗ: ವ್ಯತೀಪಾತ (ಬೆ.10.36) / ಕರಣ: ಭದ್ರೆ-ಭವ (ಬೆ.06.36-ರಾ.07.04)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ /  ತೇದಿ: 26

ಮೇಷ: ಕೆಲಸದಲ್ಲಿ ಆತುರದ ಸ್ವಭಾವ ಬೇಡ
ವೃಷಭ: ಮಧ್ಯವರ್ತಿಗಳಿಗೆ ಉತ್ತಮ ಲಾಭ ದೊರಕುವುದು
ಮಿಥುನ: ಹಿರಿಯ ಅಧಿಕಾರಿಯೊಬ್ಬರ ಭೇಟಿಯಿಂz ನಿಮಗೆ ಹೆಚ್ಚಿನ ಲಾಭವಾಗಲಿದೆ
ಕಟಕ: ವಿಪರೀತ ಕಾರ್ಯ ಬಾಹುಳ್ಯದಿಂದಾಗಿ ವಿಶ್ರಾಂತಿಯಿಲ್ಲದೆ ಬಳಲುವಿರಿ
ಸಿಂಹ: ವಿನಾಕಾರಣ ಬೇರೆಯವರ ತಪ್ಪಿಗೆ ಹೊಣೆ ಗಾರರಾಗುವ ಸಾಧ್ಯತೆ ಇದೆ
ಕನ್ಯಾ: ಸಮಾಜದಲ್ಲಿ ಗೌರವಾ ದರಗಳನ್ನು ಪಡೆಯುವಿರಿ
ತುಲಾ: ವಾಹನ, ಆಸ್ತಿ ಖರೀದಿಯ ಸಾಧ್ಯತೆ ಇದೆ
ವೃಶ್ಚಿಕ: ಬಂಡವಾಳ ಹೂಡಿಕೆಗೆ ಪ್ರಶಸ್ತ ಸಮಯ
ಧನುಸ್ಸು: ಎಲ್ಲ ಕಾರ್ಯಗಳಲ್ಲಿ ಸ್ನೇಹಿತರ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ
ಮಕರ: ಪತ್ನಿಯ ಆರೋಗ್ಯದ ಬಗ್ಗೆ ಗಮನ ಹರಿಸಿ
ಕುಂಭ: ಖರ್ಚುಗಳು ಏಕಾಏಕಿ ಹೆಚ್ಚಾಗಲಿವೆ
ಮೀನ: ಕೈ ಸಾಲ ಮಾಡಬೇಕಾದ ಸಂದರ್ಭ ಬರಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)