ಇಂದಿನ ಪಂಚಾಗ ಮತ್ತು ರಾಶಿಫಲ (15-11-2019-ಶುಕ್ರವಾರ)

ನಿತ್ಯ ನೀತಿ : ಶುದ್ಧವಾದುದೂ, ಎಳೆಯ ಹುಲ್ಲನ್ನು ತಿನ್ನುವುದೂ, ಬಹಳ ದೂರ ಓಡಲು ಶಕ್ತವಾದುದೂ ಆದ ಜಿಂಕೆ ಬೇಡರವನು ಹಾಡಿದ ಹಾಡಿನ ಆಶೆಗೆ ತುತ್ತಾಗಿ ಸಾವನ್ನರಸುತ್ತದೆ
-ಮಹಾಭಾರತ 

# ಪಂಚಾಂಗ : ಶುಕ್ರವಾರ , 15.11.2019
ಸೂರ್ಯ ಉದಯ ಬೆ.06.18/ ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ರಾ.8.17 / ಚಂದ್ರ ಅಸ್ತ ಬೆ.8.33
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯ (ರಾ.7.46)
ನಕ್ಷತ್ರ: ಮೃಗಶಿರಾ (ರಾ.11.12) / ಯೋಗ: ಶಿವ (ಬೆ.8.04) /  ಕರಣ: ವಣಿಜ್-ಭದ್ರೆ (ಬೆ.7.33-ರಾ.7.46)
ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 29

ಮೇಷ: ಸರ್ವ ಕಾರ್ಯಗಳಲ್ಲೂ ಜಯ ಲಭಿಸುವುದು
ವೃಷಭ: ಮನೆಯಲ್ಲಿ ಅಶಾಂತಿ ವಾತಾವರಣವಿರುತ್ತದೆ
ಮಿಥುನ: ದೂರ ದೇಶ ಪ್ರಯಾಣ ಮಾಡುವಿರಿ
ಕಟಕ: ಮಂಗಳ ಕಾರ್ಯಗಳು ನಡೆಯುತ್ತವೆ
ಸಿಂಹ: ಹಲವಾರು ಸಾಧನೆಗಳನ್ನು ಮಾಡುವಿರಿ
ಕನ್ಯಾ: ಹೊಸ ಒಪ್ಪಂದಗಳಿಂದ ಅನುಕೂಲವಾಗುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ
ತುಲಾ: ಕೆಲವರಿಗೆ ಉದ್ಯೋಗ ದಲ್ಲಿ ಬಡ್ತಿ ದೊರೆಯಬಹುದು
ವೃಶ್ಚಿಕ: ನಿಮ್ಮ ಕನಸು ನನಸಾಗುವ ದಿನವಾಗಿದೆ
ಧನುಸ್ಸು: ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವಿರಿ
ಮಕರ: ಪಿತ್ರಾರ್ಜಿತ ಆಸ್ತಿ ಕೈ ಸೇರಲಿದೆ. ಆರೋಗ್ಯ ವೃದ್ಧಿಸುತ್ತದೆ. ದೈವಬಲ ಚೆನ್ನಾಗಿದೆ
ಕುಂಭ: ತಾಯಿಯ ಆರೋಗ್ಯದಲ್ಲಿ ತೊಂದರೆ.
ಮೀನ: ಅನೇಕ ವಿಘ್ನಗಳು ಎದುರಾಗುತ್ತವೆ. ಮೂರ್ಖತನದಿಂದ ವರ್ತಿಸುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)