ನಿತ್ಯ ನೀತಿ : ಕಷ್ಟಗಳು ನಿನಗೆ ಎದುರಾದಷ್ಟು ನೀನು ಬಲಿಷ್ಠನಾಗುತ್ತಿ. ಹಾಗಾಗಿ ಕಷ್ಟಗಳನ್ನು ತುಂಬು ಹೃದಯದಿಂದ ಸ್ವಾಗತಿಸು.
# ಪಂಚಾಂಗ : ಶನಿವಾರ, 25-02-2023
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ /ತಿಥಿ: ಷಷ್ಠಿ / ನಕ್ಷತ್ರ: ಭರಣಿ/ ಯೋಗ: ಬ್ರಹ್ಮಾ / ಕರಣ: ಕೌಲವ
* ಸೂರ್ಯೋದಯ : ಬೆ.06.38
* ಸೂರ್ಯಾಸ್ತ : 06.28
* ರಾಹುಕಾಲ : 9.00-10.30
* ಯಮಗಂಡ ಕಾಲ : 1.30-3.00
* ಗುಳಿಕ ಕಾಲ : 6.00-7.30
# ಇಂದಿನ ರಾಶಿಭವಿಷ್ಯ :
ಮೇಷ: ಜವಾಬ್ದಾರಿಗಳು ಹೆಚ್ಚಾಗಲಿವೆ.
ವೃಷಭ: ಹಿರಿಯರ ಅನು ಭವದ ಸಲಹೆಗಳನ್ನು ಹೆಚ್ಚಿನ ಪರಿಶ್ರಮವಿಲ್ಲದೆ ಕೆಲಸ ಸಿಕ್ಕಿರುವುದಕ್ಕೆ ಮನಸ್ಸಿಗೆ ಸಂತಸವಾಗಲಿದೆ.
ಮಿಥುನ: ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ. ಯಾವುದೇ ಉದ್ವೇಗಕ್ಕೆ ಒಳಗಾಗದಿರುವುದು ಒಳ್ಳೆಯದು.
ಕಟಕ: ನಕಾರಾತ್ಮಕವಾಗಿ ಮಾತ ನಾಡುವ ಜನರಿಂದ ದೂರ ವಿರುವುದು ಬಹಳ ಒಳ್ಳೆಯದು.
ಸಿಂಹ: ಹೂವು, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಅಲ್ಪ ಪ್ರಮಾಣದ ಲಾಭ ಸಿಗಲಿದೆ.
ಕನ್ಯಾ: ಗುತ್ತಿಗೆ ಕೆಲಸ ಮಾಡುವವರಿಗೆ ಸಿಹಿಸುದ್ದಿ ದೊರೆಯಲಿದೆ.
ತುಲಾ: ಹಲವು ದಿನಗಳ ಕನಸು ನನಸಾಗಲಿದೆ.
ವೃಶ್ಚಿಕ: ಸಾಲ ತೀರಿಸಲು ಅನಿವಾರ್ಯವಾಗಿ ಕೃಷಿಕರು ಭೂಮಿ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಧನುಸ್ಸು: ಮನೆಯ ಹಿರಿಯ ಸದಸ್ಯರಿಂದ ಎಲ್ಲರಿಗೂ ಬೇಸರವಾಗುವ ಘಟನೆ ನಡೆಯಲಿದೆ.
ಮಕರ: ನಿಮ್ಮ ಮಾತೇ ಎಲ್ಲೆಡೆಯೂ ನಡೆಯಬೇಕು ಎಂಬ ಹಠ ಬೇಡ. ಸಮಾಧಾನವಿರಲಿ.
ಕುಂಭ: ಷೇರು ವ್ಯವಹಾರದಲ್ಲಿ ನಷ್ಟವಾಗಲಿದೆ.
ಮೀನ: ಅಪರೂಪದ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
#Horoscope, #KannadaHoroscope, #DailyHoroscope, #TodayHoroscope, #EesanjeHoroscope, #ಪಂಚಾಂಗ #ರಾಶಿಭವಿಷ್ಯ,