ಕಸಗುಡಿಸಿ, ಟಾಯ್ಲೆಟ್ ಕ್ಲೀನ್ ಮಾಡಲು 70 ಲಕ್ಷ ರೂ.ಗಳ ಟೆಂಡರ್ !

Social Share

ಬೆಂಗಳೂರು,ಫೆ.8- ಸಿಲಿಕಾನ್ ಸಿಟಿಯಲ್ಲಿ ಕಸಗುಡಿಸಿ, ಟಾಯ್ಲೆಟ್ ಕ್ಲೀನ್ ಮಾಡಲು ಲಕ್ಷ ಲಕ್ಷ ಹಣ ಬೇಕು. ಇದೆನಪ್ಪಾ ಕಸ ಗುಡಿಸಲು ಲಕ್ಷ ಲಕ್ಷ ಹಣ ಬೇಕು ಅಂತಿದ್ದರಲ್ಲಾ ಎಂದು ನೀವು ಹುಬ್ಬೇರಿಸಬೇಡಿ.
ಇಂತಹ ಪರಮಾದ್ಭುತಗಳು ನಡೆಯುವುದು ಕೇವಲ ಬಿಬಿಎಂಪಿಯಲ್ಲಿ ಮಾತ್ರ.

ಸಾರ್ವಜನಿಕರ ತೆರಿಗೆ ಹಣದಲ್ಲಿ ಹಗಲು ದರೋಡೆ ಮಾಡಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು ಕಸ ಗುಡಿಸುವ ಹಾಗೂ ಬಾತ್ ರೂಂ ಕ್ಲಿನಿಂಗ್ ಮಾಡುವ ಕೆಲಸಕ್ಕೆ ಬರೊಬ್ಬರಿ 70 ಲಕ್ಷ ರೂ.ಗಳ ಟೆಂಡರ್ ಕರೆದಿದ್ದಾರೆ.

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಕಸಗುಡಿಸಿ. ಬಾತ್ ರೂಮ್ ಕ್ಲಿನಿಂಗ್ ಮಾಡುವ ಕೆಲಸಕ್ಕೆ 70 ಲಕ್ಷ ರೂ.ಗಳ ಟೆಂಡರ್ ಕರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾನೂನು ಮಾಪಕ ಇಲಾಖೆಯ ಅಧಿಕಾರಿ ಲೋಕಾಯುಕ್ತ ಬಲೆಗೆ

ಬಿಬಿಎಂಪಿ ದಕ್ಷಿಣ ವಲಯದ ಪ್ರಾಜೆಕ್ಟ್ ಎಂಜಿನಿಯರ್ ಅವರು ಈ ಕೆಲಸಕ್ಕೆ ಟೆಂಡರ್ ಕರೆದಿರುವ ಜಾಹೀರಾತು ಪ್ರಕಟಗೊಂಡಿದೆ. ಕೇವಲ ಕಸ ಗುಡಿಸಿ ಟಾಯ್ಲೆಟ್ ಶುಚಿಗೊಳಿಸುವ ಕೆಲಸಕ್ಕೆ 70 ಲಕ್ಷ ರೂ.ಗಳ ಟೆಂಡರ್ ಅವಶ್ಯಕತೆ ಇತ್ತೆ ಎಂದು ಪ್ರಶ್ನಿಸಿರುವ ಪ್ರಜ್ಞಾವಂತ ನಾಗರಿಕರು ಇದರಲ್ಲಿ ಏನೋ ಗೋಲ್‍ಮಾಲ್ ನಡೆದಿರಬೇಕು ಎಂಬ ಸಂಶಯ ಹೊರ ಹಾಕಿದ್ದಾರೆ.

toilet, garbage, clean, 70 lakhs, rupees, BBMP, tender,

Articles You Might Like

Share This Article