ಬೆಂಗಳೂರು,ಮಾ.9- ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಯಾವುದಾದರೂ ಗ್ರಾಮಗಳಲ್ಲಿ ಕಳಪೆಯಾಗಿ ಶೌಚಾಲಯಗಳನ್ನು ನಿರ್ಮಿಸಿದ್ದರೆ ಅಂಥವರ ಮೇಲೆ ತಕ್ಷಣವೇ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.
ವಿಧಾನಸಭೆಯಲ್ಲಿಂದು ಶಾಸಕ ಬಂಡೆಪ್ಪ ಕಾಶಂಪುರ್ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಪ್ರಧಾನಿ ನರೇಂದ್ರಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ ಗ್ರಾಮೀಣ ಭಾಗದ ಮಹಿಳೆಯರು ಬೀದಿಗೆ ಬಂದು ಬರ್ಹಿದೆಸೆಗೆ ಹೋಗಬಾರದು ಎಂದು ಈ ಯೋಜನೆಯನ್ನು ಆರಂಭಿಸಿದ್ದಾರೆ.
ಚಾಲಯಗಳನ್ನು ಸರಿಯಾಗಿ ನಿರ್ಮಾಣ ಮಾಡದ ಅಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಸಿದರು.
ಬೀದರ್ ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 103 ಗ್ರಾಮಗಳ ಪೈಕಿ 41,525 ಕುಟುಂಬಗಳಿಗೆ ಶೌಚಾಲಯ ರಹಿತ ಎಂದು ವರದಿಯಾಗಿತ್ತು. 2019ರಂದು ರಾಜ್ಯ ಹಾಗೂ ದೇಶವನ್ನು ಬಯಲು ಬರ್ಹಿದೆಸೆ ಮುಕ್ತ ಎಂದು ಘೋಷಿಸಲಾಗಿದೆ.
ಕೆಲವು ಗ್ರಾಮಗಳಲ್ಲಿ ಶೌಚಾಲಯಗಳ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಶಾಸಕರು ನನ್ನ ಗಮನಕ್ಕೆ ತಂದಿದ್ದರು. ನಾನು ಆ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ. ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಬಿಡುವುದಿಲ್ಲ ಎಂದರು.
ಪ್ರತಿ ಗ್ರಾಪಂ ಸಭೆಯಲ್ಲಿ ನಾನು ಪಂಚಾಯ್ತಿ ಸದಸ್ಯರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಲು ಜಾಗೃತಿ ಮೂಡಿಸಲು ಮನವಿ ಮಾಡುತ್ತೇನೆ. ನಮ್ಮ ಅಕ್ಕತಂಗಿಯರು ಬೀದಿಗೆ ಬಂದು ಬರ್ಹಿದೆಸೆಗೆ ಹೋಗುವ ಪರಿಸ್ಥಿತಿ ಬರಬಾರದು. ಹಣ ಎಷ್ಟೇ ಖರ್ಚಾದರೂ ಸರಿಯೇ ಪ್ರತಿಯೊಬ್ಬರಿಗೂ ಶೌಚಾಲಯ ನಿರ್ಮಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.
