ಅಸ್ಸಾಮ್ ಡಿಸಿಪಿಯಾಗಿ ಬಾಕ್ಸರ್ ಲವ್ಲೀನಾ ನೇಮಕ

Social Share

ಗುವಹಟಿ, ಜ. 12- ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಬೊರ್ಗೆಹೆನ್ ಅವರ ಕ್ರೀಡಾ ಸಾಧನೆಯನ್ನು ಮೆಚ್ಚಿ ಅವರನ್ನು ಇಂದಿನಿಂದ ಅಸ್ಸಾಮ್ ಪೊಲೀಸ್ ಇಲಾಖೆಯಲ್ಲಿ ಡಿಸಿಪಿ ಹುದ್ದೆಯನ್ನು ನೀಡುವ ಮೂಲಕ ಗೌರವಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಿಳಿಸಿದ್ದಾರೆ.
ಜನತಾ ಭವನದಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಅವರು ಬಾಕ್ಸರ್ ಲವ್ಲೀನಾಗೆ ಅಸ್ಸಾಮ್‍ನ ಡಿಸಿಪಿಯಾಗಿ ನೇಮಕ ಮಾಡಿರುವ ಪತ್ರವನ್ನು ಹಸ್ತಾಂತರಿಸಿ ಅವರ ಕ್ರೀಡಾ ಸಾಧನೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತಾ ಹಾಗೂ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ಜಿಸ್ನು ಬುರುವಾ ಅವರು ಹಾಜರಿದ್ದರು.
ಬಾಕ್ಸರ್ ಲವ್ಲೀನಾ ಅವರು ಟೊಕಿಯೋ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕ ಗೆದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಸ್ವಾ ಅವರು ಲವ್ಲೀನಾ ಅವರನ್ನು ಅಸ್ಸಾಮ್‍ನ ಡಿಸಿಪಿಯಾಗಿ ನೇಮಿಸುವುದಾಗಿ ಘೋಷಿಸಿದ್ದರು.

Articles You Might Like

Share This Article