ಬೆಂಗಳೂರು,ಜ.26-ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಅಧ್ಯಕ್ಷತೆಯಲ್ಲಿ ಜೆಡಿಎಸ್ ಕೋರ್ ಸಮಿತಿ ರಚಿಸಲಾಗಿದ್ದು, ನಾಳೆ ಅದರ ಮೊದಲ ಸಭೆ ನಡೆಯಲಿದೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆಯೂ ನಾಳೆ ಚರ್ಚೆ ನಡೆಯಲಿದೆ.
ಕೋರ್ ಸಮಿತಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಗೂ ತಾವು ವಿಶೇಷ ಆಹ್ವಾನಿತರಾಗಿರುತ್ತೇವೆ ಎಂದರು. ಸಮಿತಿಯು ಪಕ್ಷ ಸಂಘಟನೆ, ಬಲವರ್ಧನೆಗೆ ರೂಪಿಸಿರುವ ಯೋಜನೆಗಳು, ಚುನಾವಣಾ ಪ್ರಕ್ರಿಯೆ ಒಳಗೊಂಡಂತೆ ಪಕ್ಷದ ನಿಲುವುಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದೆ ಎಂದರು.
ಸಮಿತಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಸಿ.ಎಸ್.ಪುಟ್ಟರಾಜು, ವೆಂಕಟರಾವ್ ನಾಡಗೌಡ, ಎಂ.ಕೃಷ್ಣ ರೆಡ್ಡಿ, ರಾಜ ವೆಂಕಟಪ್ಪ ನಾಯಕ ದೊರೆ, ಕೆ.ಎ.ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್, ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ಕೆ.ಎಂ.ತಿಮ್ಮರಾಯಪ್ಪ, ಶಾರದಪುರ್ಯಾ ನಾಯಕ್, ಟಿ.ಎ.ಶರವಣ, ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮೊಹಮ್ಮದ್ ಜಫ್ರುಲ್ಲ ಖಾನ್, ನಾಸೀರ್ ಭಗವಾನ್, ಹನುಮಂತ ಬಸಪ್ಪ ಮಾವಿನಮರದ, ರೂತ್ ಮನೋರಮ, ಸುಧಾಕರ್.ಎಸ್ ಶೆಟ್ಟಿ, ವಿ.ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್ ಸದಸ್ಯರಾಗಿರುತ್ತಾರೆ.
ಮಾಜಿ ಸಚಿವ ಎಂ.ಎನ್.ನಬಿ ರಾಜ್ಯ ಕಾರ್ಯಾಧ್ಯಕ್ಷರಾಗಿದ್ದು, ರಾಜ ವೆಂಕಟಪ್ಪ ನಾಯಕ್ ದೊರೆ ಅವರನ್ನು ರಾಜ್ಯ ಪರಿಶಿಷ್ಟ ಪಂಗಡದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದರು.
