ಪಠ್ಯದಲ್ಲಿ ಕನ್ನಡ ಚಿತ್ರರಂಗದ ಮೇರುನಟರ ಯಶೋಗಾತೆ ಸೇರಿಸಲು ಸಿಎಂಗೆ ಮನವಿ

Social Share

ಬೆಂಗಳೂರು,ಜ.29- ಕನ್ನಡ ಚಿತ್ರರಂಗದ ಮೇರುನಟರಾದ ದಿವಂಗತ ಶಂಕರ್‍ನಾಗ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್ ಹಾಗೂ ಕರ್ನಾಟಕರತ್ನ ಪುನೀತ್ ರಾಜಕುಮಾರ್ ಅವರ ಯಶೋಗಾಥೆಯನ್ನು ಶಾಲೆ ಅಥವಾ ಕಾಲೇಜು ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಹಲವು ಮಹನೀಯರನ್ನು ತಮ್ಮ ನಟನ ಕೌಶಲ್ಯದ ಮೂಲಕ ಮತ್ತು ತಮ್ಮ ಜೀವನದ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಆದರ್ಶ ಪ್ರಾಯಾರಾಗಿ ಸಾಂಸ್ಕೃತಿಕ ಲೋಕವನ್ನು ಬೆಳಗಿದ್ದಾರೆ.

ತಮ್ಮಲ್ಲಿ ನಟನ ಪ್ರೌಡಿಮೆ, ತಮ್ಮ ಜೀವನ ಶೈಲಿಯ ಮೂಲಕ ಕರ್ನಾಟಕದ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಕಿ ಅನಾವರಣಗೊಳಿಸಿ ಆದರ್ಶರಾಗಿದ್ದಾರೆ ಇಂಥ ಮಹನೀಯರ ಪರಿಚಯಗಳು ಇಂದಿನ ಮಕ್ಕಳಿಗೆ ಆಗಬೇಕಿದೆ ಎಂದರು.

ಏಪ್ರಿಲ್ ವೇಳೆಗೆ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಸೇವೆ ಆರಂಭ

ಅವರ ಶ್ರಮ, ಜೀವನ ಸಾಧನೆ, ಮಾದರಿ ವ್ಯಕ್ತಿತ್ವಗಳು, ಆದರ್ಶ, ಚಿಂತನೆಗಳು ಬೆಳೆಯುವ ಮಕ್ಕಳಿಗೆ ಮಾರ್ಗದರ್ಶನವಾಗಬೇಕಿದೆ. ಈ ನಿಟ್ಟಿನಲ್ಲಿ ಇಂಥ ಸಾಧಕರ ಯಶೋಗಾಥೆಗಳು ಪಠ್ಯದಲ್ಲಿ ಸೇರ್ಪಡೆಯಾಗಬೇಕಿದೆ. ಈಗಾಗಲೇ ವರನಟ ಡಾ. ರಾಜಕುಮಾರ್ ಅವರ ಕುರಿತು 6ನೇ ತರಗತಿ ಕನ್ನಡ ಪಠ್ಯವನ್ನಾಗಿ ರೂಪಿಸಲಾಗಿದೆ. ಅಲ್ಲದೆ, 9ನೇ ತರಗತಿ ಕನ್ನಡ ಪಠ್ಯದಲ್ಲಿ ಪಂಡರಿಬಾಯಿ ಅವರ ಬಗ್ಗೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.

ಈಗ ಬಹುಮುಖ್ಯವಾಗಿ ಆಗಬೇಕಿರುವ ಮತ್ತೊಂದು ಕಾರ್ಯವೆಂದರೆ ಕನ್ನಡ ಚಿತ್ರರಂಗದ ಮೇರು ನಟರುಗಳಗಿದ್ದ ಶ್ರೀ ಶಂಕರ್ ನಾಗ್, ಡಾ. ವಿಷ್ಣುವರ್ಧನ್, ಡಾ.ಅಂಬರೀಷ್ ಹಾಗೂ ಯುವ ನಟ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಯಶೋಗಾಥೆಯನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕಿದೆ ಎಂದರು.

ಈಗಾಗಲೇ ಬೆಂಗಳೂರಿನಲ್ಲಿ ಡಾ. ರಾಜಕುಮಾರ್, ಅಂಬರೀಷ್ ಅವರ ಸ್ಮಾರಕ ಹಾಗೂ ಮೈಸೂರಿನಲ್ಲಿ ವಿಷ್ಣವರ್ಧನ್ ಅವರ ಸ್ಮಾರಕವನ್ನು ನಿರ್ಮಾಣ ಮಾಡಿರುವುದು ಔಚಿತ್ಯಪೂರ್ಣವಾಗಿದೆ. ಅಲ್ಲದೆ ಈ ಎಲ್ಲ ನಟರೂ ಸಹ ತಮ್ಮ ಅಭಿನಯದ ಮೂಲಕ ಹಾಗೂ ಉತ್ತಮ ಚಿತ್ರಗಳನ್ನು ಸಮಾಜಕ್ಕೆ ನೀಡುವ ಮೂಲಕ ಅತ್ಯುತ್ತಮ ಸಂದೇಶಗಳನ್ನು ನೀಡಿರುತ್ತಾರೆ. ಜತೆಗೆ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಪ್ರಯತ್ನವೂ ಇವರಿಂದ ಆಗಿದೆ ಎಂದರು.

ಇವರು ಮೇರು ನಟರಾಗಿದ್ದು, ಎಲ್ಲರಿಗೂ ಆದರ್ಶವಾಗಿ ಬಾಳಿ ಬದುಕಿದರು. ಹೀಗಾಗಿ ಶಾಲಾ ಅಥವಾ ಕಾಲೇಜು ಮಕ್ಕಳಿಗೆ ಇವರ ಕುರಿತಾದ ಮಾಹಿತಿಯನ್ನು ನೀಡುವುದು ಅತ್ಯವಶ್ಯವಾಗಿದೆ. ಇದಕ್ಕಾಗಿ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಈ ನಟರ ಜೀವನಗಾಥೆಯನ್ನು ಸೇರ್ಪಡೆಗೊಳಿಸಬೇಕಿದೆ ಎಂದು ಮನವಿ ಮಾಡಿದರು.

ಕನ್ನಡ ನಾಡು-ನುಡಿ ವಿಷಯಕ್ಕೆ ಬಂದಾಗ ಇವರು ತೆಗೆದುಕೊಂಡ ನಿಲುವುಗಳು, ಕನ್ನಡದ ಅಸ್ಮಿತೆಗಾಗಿ ಇವರ ಹೋರಾಟ ಸೇರಿದಂತೆ ಇನ್ನಿತರ ವಿಷಯಗಳನ್ನು ಮಕ್ಕಳಿಗೆ ತಿಳಿಹೇಳುವ ಕೆಲಸ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ತಾವುಗಳು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜÁರಿಗೆ ಬರುವಂತೆ ಈ ಮಹನೀಯರ ಕುರಿತಾದ ವಿಷಯಗಳನ್ನು ಕನ್ನಡ ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕೆಂದು ಅವರು ಕೋರಿದ್ದಾರೆ.

#TopKannadaActors, #Textbook, #DrRajkumar, DrVishnuvardhan, #Ambareesh, #ShankarNag,

Articles You Might Like

Share This Article